ಬ್ರಹ್ಮಾವರ: ಸಮುದಾಯದ ಗಣ್ಯರ, ಧಾರ್ಮಿಕ ನೇತಾರರ ಸಮಾವೇಶ

Update: 2021-10-10 11:08 GMT

ಬ್ರಹ್ಮಾವರ, ಅ.10: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ಘಟಕ ವತಿಯಿಂದ ಸಮುದಾಯದ ಗಣ್ಯರ, ಧಾರ್ಮಿಕ ನೇತಾರರ ಸಮಾವೇಶ ಶನಿವಾರ ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.

ಸಾಮಾಜಿಕ ಧುರೀಣ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್ ಗಿಡಕ್ಕೆ ನೀರೆರೆಯುವ ಮೂಲಕ ಸಭೆಗೆ ಚಾಲನೆ ನೀಡಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಪ್ರಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊದಿನಬ್ಬ ಮತ್ತು ವಕ್ಫ್ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಕೆ.ಪಿ.ಇಬ್ರಾಹಿಂ ಮಾತನಾಡಿದರು.

ಹುಸೇನ್ ಕೋಡಿಬೇಂಗ್ರೆ ಕಾನೂನು ಮಾಹಿತಿ ನೀಡಿದರು. ಶಿಕ್ಷಕ ರಫೀಕ್ ಮಾಸ್ಟರ್ ಪ್ರತಿಭೆಯನ್ನು ಸಮುದಾಯದ ಮತ್ತು ಸಮಾಜದ ಒಳಿತಿಗೆ ಬಳಸಿ ಕೊಳ್ಳುವ ಕಲೆಯ ಬಗ್ಗೆ ಮಾತನಾಡಿದರು.

ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷ ಎಚ್.ಎಂ.ಯಾಸೀನ್ ಇಸ್ಲಾಮ್ ಧರ್ಮಾಧಾರಿತ ಸಾಮಾಜಿಕ ಬದುಕು ಮತ್ತು ನಮ್ಮ ಹೊಣೆಗಾರಿಕೆಗಳು ಕುರಿತು ವಿಷಯ ಮಂಡಿಸಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಖತೀಬ್ ರಶೀದ್ ಮಲ್ಪೆ, ಹಿರಿಯ ಉಪಾಧ್ಯಕ್ಷರಾದ ಮುಹಮ್ಮದ್ ಗೌಸ್ ಮಿಯಾರ್, ಆಸಿಫ್ ಬೈಕಾಡಿ ಉಪಸ್ಥಿತರಿದ್ದರು.

ಒಕ್ಕೂಟದ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜಮಾಲುದ್ದೀನ್ ಸ್ವಾಗತಿಸಿದರು. ಅಡ್ವಕೇಟ್ ಹನೀಫ್ ಕುರ್ ಆನ್ ಪಠಿಸಿದರು. ತಾಲೂಕು ಕಾರ್ಯದರ್ಶಿ ತಾಜುದ್ದೀನ್ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News