ಮಂಗಳೂರು: ತಾಜ್ ಸೈಕಲ್‌ನ 5ನೆ ಶೋರೂಮ್ ಉದ್ಘಾಟನೆ

Update: 2021-10-10 12:07 GMT

ಮಂಗಳೂರು, ಅ.10: ಕಳೆದ ಸುಮಾರು 94 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತಾಜ್ ಸೈಕಲ್ ಕಂಪನಿಯ 5ನೆ ಶೋರೂಮ್ ನಗರದ ಬಿಜೈ ಕಾಪಿಕಾಡ್‌ನ ಅಪ್‌ಕೋ ಚೇಂಬರ್‌ನಲ್ಲಿ ರವಿವಾರ ಉದ್ಘಾಟನೆಗೊಂಡಿತು.

ತಾಜ್ ಸೈಕಲ್ ಕಂಪನಿಯ ಮಾಲಕ ಎಂ.ಎಸ್. ಮುತ್ತಲಿಬ್ ಹಾಗೂ ಅವರ ಮೊಮ್ಮಗ ಝಿಯಾನ್ ಇಸ್ಮಾಯೀಲ್ ಮುಬೀನ್ ಶೋ ರೂಮ್ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಮತ್ತು ಮೇಯರ್ ಪ್ರೇಮಾನಂದ ಶೆಟ್ಟಿ ಪಾಲ್ಗೊಂಡು ಶುಭ ಹಾರೈಸಿದರು. ಈ ಸಂದರ್ಭ ಮುತ್ತಲಿಬ್ ಅವರ ಪತ್ನಿ ಶಹನಾಝ್ ಎಂ, ಪುತ್ರ ಶೇಖ್ ಇಸ್ಮಾಯೀಲ್ ಮುಬೀನ್, ಅಳಿಯ ಅಬ್ದುಸ್ಸಮದ್ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಏ ವನ್ ಸೈಕಲ್ ಕಂಪನಿಯ ವ್ಯವಹಾರದಲ್ಲಿ ತಾಜ್‌ ಸೈಕಲ್ ಕಂಪನಿಯು ಪ್ರಥಮ ಸ್ಥಾನದಲ್ಲಿದ್ದು, ಕ್ರೋಸ್ ಬೈಕ್‌ನ ಅಧಿಕೃತ ವಿತರಕರಾಗಿ ಮತ್ತು ಬಿಎಸ್‌ಎ, ಹರ್ಕ್ಯುಲಸ್, ಕಿಸ್ಟೋ, ಹೀರೋ ಪಯರ್ ಪೋಕ್ಸ್, ಮೊಂಟ್ರ ಮತ್ತಿತರ ಬ್ರಾಂಡ್ ಸೈಕಲ್‌ಗಳ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳಾದ ಪೋಲಿಗನ್ ಸ್ಕೋಟ್ ಸ್ನೆಲ್ ಫುಜಿ, ಜಯನ್ಟ್ ಹಾಗೂ ಮಕ್ಕಳ ತ್ರಿಚಕ್ರ ಸೈಕಲ್ ಹಾಗೂ ಮಕ್ಕಳ ಟೋಯ್ಸ್ ಗಳ ಅಧಿಕೃತ ಮಾರಾಟಗಾರರಾಗಿದ್ದೇವೆ.

ನನ್ನ ತಂದೆ ದಿವಂಗತ ಎಂ.ಎಸ್. ಇಸ್ಮಾಯಿಲ್ 1927ರಲ್ಲಿ ತಾಜ್ ಸೈಕಲ್ ಕಂಪನಿಯನ್ನು ಆರಂಭಿಸಿದ್ದು, ರಾಜ್ಯದಲ್ಲಿ 94 ವರ್ಷ ಪೂರೈಸಿದ ಏಕೈಕ ಸೈಕಲ್ ಕಂಪನಿ ನಮ್ಮದಾಗಿದೆ. 1927ರಲ್ಲಿ ಮೈದಾನ ರಸ್ತೆಯ ಇಸ್ಮಾಯಿಲ್ ಬಿಲ್ಡಿಂಗ್‌ನಲ್ಲಿ ಕಂಪನಿ ಆರಂಭಗೊಂಡಿದ್ದು, ಇಂದಿಗೂ ಅದೇ ಬಿಲ್ಡಿಂಗ್‌ನಲ್ಲಿ ವ್ಯವಹಾರ ಮುಂದುವರಿದಿದೆ. 1973ರಿಂದ ನಾನು ವ್ಯವಹಾರ ಆರಂಭಿಸಿ 2009ರಲ್ಲಿ ಪಂಪ್‌ವೆಲ್ ಬಳಿಯ ತೃಪ್ತಿ ಕಾಂಪ್ಲೆಕ್ಸ್‌ನಲ್ಲಿ 2ನೆ, 2011ರಲ್ಲಿ ಬಿಸಿರೋಡ್‌ನ ಮಿತ್ತಬೈಲ್ ಮಸೀದಿ ಬಳಿ 3ನೆ, 2017ರಲ್ಲಿ ಮಂಗಳಾದೇವಿ ಬೋಳಾರ್ ರೋಡ್‌ನ ಹೊಯ್ಗೆ ಬಜಾರ್‌ನಲ್ಲಿ 4ನೆ ಶೋರೂಂ ಆರಂಭಿಸಲಾಗಿದ್ದು, ಇದೀಗ ಕಾಪಿಕಾಡ್‌ನಲ್ಲಿ 5ನೆ ಶೋರೂಮ್ ತೆರದಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News