ಪಡುಬಿದ್ರಿ ಬಂಟರ ಸಂಘದಿಂದ ಮನೆ ಹಸ್ತಾಂತರ

Update: 2021-10-10 17:08 GMT

ಪಡುಬಿದ್ರಿ : ಸಮಾಜದ ಬಡ ವರ್ಗದ ಜನರಿಗೆ ಮನೆ ನಿರ್ಮಾಣ, ಮದುವೆ, ಆರೋಗ್ಯ, ಶಿಕ್ಷಣ ಇತ್ಯಾದಿಗಳಿಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ದಾನಿಗಳ ಸಹಕಾರದೊಂದಿಗೆ ರೂ.5 ಕೋಟಿಗೂ ಹೆಚ್ಚು ಸಹಕಾರ ನೀಡಲಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಹೆಜಮಾಡಿಯ ಗುಂಡಿ ಬಳಿ ಪಡುಬಿದ್ರಿ ಬಂಟರ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೆರವಿನೊಂದಿಗೆ ರೂ.6.50 ಲಕ್ಷ ವ್ಯಯಿಸಿ ನಿರ್ಮಿಸಲಾದ ಮನೆಯನ್ನು ಇಂದಿರಾ ಶೆಟ್ಟಿ ಎಂಬವರಿಗೆ ಶುಕ್ರವಾರ ಹಸ್ತಾಂತರಿಸಿ ಅವರು ಮಾತನಾಡಿದರು.

ಒಕ್ಕೂಟದ ವತಿಯಿಂದ ಈವರೆಗೆ 150ಕ್ಕೂ ಹೆಚ್ಚು ಮನೆಗಳನ್ನು ನೀಡಲಾಗಿದೆ. ಬಂಟ ಸಮಾಜದೊಂದಿಗೆ ಇತರ ಸಮಾಜ ದವರಿಗೂ ಸಹಕಾರಿ ನೀಡಿದ್ದು, ಮುಂದೆ ಬಡವರಿಗೆ ಶಕ್ತಿ ನೀಡುವ ಉದ್ದೇಶದಿಂದ ದಾನಿಗಳ ನೆರವಿನ ಮೂಲಕ ಮತ್ತಷ್ಟು ಸಮಾಜ ಸೇವೆಗೈಯ್ಯಲಾಗುವುದು ಎಂದವರು ಹೇಳಿದರು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಪಡುಬಿದ್ರಿ ವ್ಯಾಪ್ತಿಯ ಬಂಟ ಸಮಾಜದ ಅರ್ಹರಿಗೆ ಬೇಕಾದ ಸವಲತ್ತುಗಳನ್ನು ನೀಡಲು ಸಂಘ ಬದ್ಧವಾಗಿದೆ. ಸಂಘದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಪು ಬಳಿ ಇನ್ನೊಂದು ಮನೆ ನಿರ್ಮಾಣ ಮಾಡಲಾಗಿದೆ. ಅದನ್ನೂ ಶೀಘ್ರ ಹಸ್ತಾಂತರಿಸಲಾಗುವುದು ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ, ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಟ್ರಸ್ಟಿ ಮಾಧವ ಸಿ.ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನೇತ್ರಾವತಿ ಶೆಟ್ಟಿ, ಮಾಜಿ ಅಧ್ಯಕ್ಷೆಯರಾದ ಶೋಭಾ ಜಗದೀಶ್ ಶೆಟ್ಟಿ ಮತ್ತು ಅಕ್ಷತಾ ಶೆಟ್ಟಿ, ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಎರ್ಮಾಳ್, ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಮುರಳೀನಾಥ ಶೆಟ್ಟಿ, ವೈ.ಗೋಪಾಲ ಶೆಟ್ಟಿ, ಭಾಸ್ಕರ ಶೆಟ್ಟಿ, ಹರೀಶ್ ಶೆಟ್ಟಿ ಪಾದೆಬೆಟ್ಟು, ಅಕ್ಷತಾ ಶೆಟ್ಟಿ, ಜಯಂತಿ ಶೆಟ್ಟಿ, ವಾಣಿ ರವಿ ಶೆಟ್ಟಿ, ಕಲ್ಪನಾ ಶೆಟ್ಟಿ, ರಶ್ಮಿ ಶೆಟ್ಟಿ, ಧನಪಾಲ್ ಶೆಟ್ಟಿ, ರವಿ ಶೆಟ್ಟಿ ಜತ್ತಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News