ಎಸ್ಸೆಸ್ಸೆಫ್ ವತಿಯಿಂದ 'ಬೀದಿ ಕಲಿಕೆ' ನಡೆಸಿ ಪ್ರತಿಭಟನೆ

Update: 2021-10-10 18:08 GMT

ಕಾಸರಗೋಡು : ಪ್ಲಸ್ ಒನ್ ಸೀಟ್ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕೂಡಲೇ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಎಸ್ ಎಸ್ ಎಫ್ ಡಿವಿಷನ್ ಕೇಂದ್ರಗಳಲ್ಲಿ ಬೀದಿ ಕಲಿಕೆ ನಡೆಸಿ ಪ್ರತಿಭಟಿಸಿತು.

ಉನ್ನತ ಗ್ರೇಡ್ ಲಭಿಸಿಯೂ ಕೂಡ ಇಚ್ಛಿಸುವ ಕೊಂಬಿನೇಷನ್ ಅಥವಾ ಕಾಲೇಜುಗಳು ಲಭಿಸದಂಥ ಸ್ಥಿತಿಯಾಗಿದೆ ಜಿಲ್ಲೆಯಲ್ಲಿರುವುದು. ಸಾವಿರಾರು ವಿದ್ಯಾರ್ಥಿಗಳಿಗೆ ಪ್ರವೇಶಾತಿ ಲಭಿಸಬೇಕಾದರೆ ಫೀಸ್ ಕಟ್ಟಬೇಕಾದ ಸಂದಿಗ್ಧತೆಯಿದೆ. ಕೇರಳ ಮೋಡಲ್ ವಿದ್ಯಾಭ್ಯಾಸವೆಂದು ಜಂಭ ಕೊಚ್ಚುವ ಸರಕಾರದ ಭಾಗದಿಂದ ಬರುವ ಪ್ರತಿಕ್ರಿಯೆಗಳು ನಿರಾಶಾಜನಕವಾಗಿದೆ. ಬೀದಿಗಳಲ್ಲಿ ತರಗತಿ ಕೋಣೆಗಳನ್ನುಂಟು ಮಾಡಿ ಪ್ಲಸ್ ಒನ್ ತರಗತಿಯ ಪಾಲಿಟಿಕ್ಸ್ ವಿಷಯದ ಐದನೇ ಅಧ್ಯಾಯ ಹಕ್ಕುಗಳ ಕುರಿತಾಗಿರುವ ಕ್ಲಾಸ್ ತೆಗೆದು, ಘೋಷ ವಾಕ್ಯಗಳನ್ನು ಕೂಗುವ ಮೂಲಕವಾಗಿದೆ ಪ್ರತಿಭಟನೆ ಹಮ್ಮಿಕೊಂಡದ್ದು.

ಕೊನೆಯ ಸಾಲಿನ ಕೊನೆಯ ಮಗುವಿಗೂ ಅವಕಾಶ ಲಭಿಸುವಾಗ ಮಾತ್ರವಾಗಿದೆ ಶಿಕ್ಷಣ ನ್ಯಾಯಯುತವಾಗಿ ಗೋಚರವಾಗು ವುದೆಂದು ಎಸ್ ಎಸ್ ಎಫ್ ಅಭಿಪ್ರಾಯಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News