ಕಾಸರಗೋಡು: ತುಳುಲಿಪಿ ದಿನಾಚರಣೆ

Update: 2021-10-11 10:50 GMT

ಕಾಸರಗೋಡು: ತುಳು ಲಿಪಿ ತುಳು ಭಾಷೆ ತುಳು ಸಂಸ್ಕೃತಿ ತುಳುನಾಡು ಇದರ ಉಳಿವಿಗಾಗಿ ಸತತ ಪರಿಶ್ರಮ ವಹಿಸುತ್ತಿರುವ ಜೈ ತುಳುನಾಡು ಸಂಘಟನೆಯ ಕಾಸರಗೋಡು ಘಟಕದಿಂದ ಕುಂಬಳೆ ಸಮೀಪದ ಸಿರಿಯ ಶಂಕರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಇವರ ಜಯಂತಿಯಂದು ವಿಶ್ವ ತುಳು ಲಿಪಿ ದಿನಾಚರಣೆಯನ್ನಾಗಿ  ಆಚರಿಸಲಾಯಿತು.

ಕಾರ್ಯಕ್ರಮವನ್ನು  ಜೈ ತುಳುನಾಡು ಸಂಘಟನೆಯ ಗೌರವಾಧ್ಯಕ್ಷ ಉಮೇಶ್ ಸಾಲಿಯಾನ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಳುನಾಡು ಸಂಘಟನೆ ಕಾಸರಗೋಡು ಇದರ ಅಧ್ಯಕ್ಷರಾದ ಹರಿಕಾಂತ ಕಾಸರಗೋಡು ಇವರು ವಹಿಸಿದ್ದರು ಕಾರ್ಯಕ್ರಮಕ್ಕೆ ಜೈ ತುಳುನಾಡು ಸಂಘಟನೆಯ ಕಾರ್ಯದರ್ಶಿ ಕಾರ್ತಿಕ್ ಅವರು ಸ್ವಾಗತಿಸಿದರು.

ಅಳಿವಿನಂಚಿನಲ್ಲಿದ್ದ ತುಳು ಲಿಪಿಯನ್ನು ಒರೆಗೆಹಚ್ಚಿ ಅದನ್ನು ಚಾಲ್ತಿಯಲ್ಲಿ ತರುವಲ್ಲಿ ವೆಂಕಟರಾಜ ಪುಣಿಂಚಿತ್ತಾಯ ಇವರು ಮಹತ್ತರ ಪಾತ್ರವನ್ನು ವಹಿಸಿದರು ಇವರು ಅನೇಕ ತುಳು ಕೃತಿಗಳನ್ನು ಬರೆದು  ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು. ವಿಶ್ವ ತುಳು ಲಿಪಿ ದಿನಾಚರಣೆಯ ಅಂಗವಾಗಿ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ನಂತರ ವಿನೋದ ಪ್ರಸಾದ್  ಹಾಗೂ ಕುಶಾಲಾಕ್ಷಿ  ವಿ ಕಣ್ವ ತೀರ್ಥ ಇವರು ವೆಂಕಟರಾಜ ಪುಣಿಂಚಿತ್ತಾಯ ಅವರ ಬದುಕಿನ ಬಗ್ಗೆ ಹಾಗೂ ಸಂಶೋಧನೆ ಅದೇ ರೀತಿ ತುಳು ಲಿಪಿಯ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ವೇತ ಕಜೆ  ಕುಶಾಲಕ್ಷಿ ಕನ್ವತೀರ್ಥ ಹಾಗೂ ಉಮೇಶ್ ಸಿರಿಯ ಸ್ವ ರಚಿತ  ಕವಿತಾ ವಾಚನ ನಡೆಸಿದರು ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ  ಪರವಾಗಿ ವಿತರಿಸಲಾಯಿತು ಬಳಿಕ ನಡೆದ ಸಭೆಯಲ್ಲಿ ಸಂಘಟನೆಯ ಕಾರ್ಯಯೋಜನೆಯ ಬಗ್ಗೆ ಚರ್ಚೆ ನಡೆಯಿತು.

ಜೈ ತುಳುನಾಡು ಸಂಘಟನೆ ಕಾಸರಗೋಡು ಇದರ ಅಧ್ಯಕ್ಷರಾದ ಹರಿಕಾಂತ ಕಾಸರಗೋಡು ಇವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮವನ್ನು ಸಂಘಟನೆ ಕಾರ್ಯದರ್ಶಿ ಕಾರ್ತಿಕ್ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕವಿಯತ್ರಿ ಶ್ವೇತ ಕಜೆ ಸಂಘಟನೆಯ ಹಿರಿಯ ಕಾರ್ಯಕರ್ತ ಯಜ್ಞೇಶ್ ಕಿನ್ನಿಂಗಾರು, ಜಗನ್ನಾಥ್ ಕುಲಾಲ್ ರಜತ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹರಿಕಾಂತ ಕಾಸರಗೋಡು ನಿರ್ವಹಿಸಿ ರಮೇಶ್ ಅಟ್ಟೆಗೊಳಿ  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News