×
Ad

"ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸೇರ್ಪಡೆಗೊಳಿಸದಿರುವುದರಿಂದ ನನ್ನ ಸ್ಥಾನಮಾನ ಕಡಿಮೆಯಾಗುವುದಿಲ್ಲ"

Update: 2021-10-11 19:56 IST

ಸುಲ್ತಾನಪುರ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ಕೆಲವು ದಿನಗಳ ನಂತರ ಮಾತನಾಡಿದ  ಸಂಸದೆ ಮೇನಕಾ ಗಾಂಧಿ ತಾನು 20 ವರ್ಷಗಳ ಕಾಲ ಪಕ್ಷದಲ್ಲಿರುವುದಕ್ಕೆ ತೃಪ್ತಿ ಹೊಂದಿದ್ದು, ತನ್ನನ್ನು ಸಮಿತಿಯಲ್ಲಿ ಸೇರಿಸದಿರುವುದು ತನ್ನ ಸ್ಥಾನಮಾನವನ್ನು ಕಡಿಮೆ ಮಾಡುವುದಿಲ್ಲ ಎಂದು ಹೇಳಿದರು.

"ನಾನು 20 ವರ್ಷಗಳ ಕಾಲ ಬಿಜೆಪಿಯಲ್ಲಿರುವುದಕ್ಕೆ ತೃಪ್ತಿ ಹೊಂದಿದ್ದೇನೆ. ಕಾರ್ಯಕಾರಿ ಸಮಿತಿಯಲ್ಲಿ ಇಲ್ಲದಿರುವುದು ಒಬ್ಬರ ಸ್ಥಾನಮಾನವನ್ನು ಕಡಿಮೆ ಮಾಡುವುದಿಲ್ಲ. ನನ್ನ ಮೊದಲ ಧರ್ಮವೆಂದರೆ ಸೇವೆ ಮಾಡುವುದು. ಜನರ ಹೃದಯದಲ್ಲಿ ನನಗೆ ಸ್ಥಾನ ಸಿಗುವುದು ಮುಖ್ಯ" ಎಂದು ಮೇನಕಾ ಗಾಂಧಿ ಹೇಳಿದರು.

 ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ತಮ್ಮ ಹೆಸರಲ್ಲದೆ  ಮಗ ಹಾಗೂ  ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರ ಹೆಸರನ್ನೂ ಸೇರಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೇನಕಾ ಗಾಂಧಿ ಸೋಮವಾರ ಪ್ರತಿಕ್ರಿಯಿಸಿದರು.

ಮೇನಕಾ ಗಾಂಧಿ ತನ್ನ ಸಂಸತ್ ಕ್ಷೇತ್ರಕ್ಕೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News