ಮುಸ್ಲಿಂ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ ಸುಳ್ಯದಲ್ಲಿ ಎಸ್ಕೆಎಸ್ಸೆಸ್ಸೆಫ್ ಪ್ರತಿಭಟನೆ

Update: 2021-10-11 15:07 GMT

ಸುಳ್ಯ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಚೋಧನಕಾರಿ ಹೇಳಿಕೆಗಳ ಮೂಲಕ ಹಿಂದೂ ಮುಸ್ಲಿಮರಲ್ಲಿ ಒಡಕು ಉಂಟು ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಖಂಡಿಸುತ್ತೇವೆ ಎಂದು ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಹೇಳಿದರು.

ಅವರು ಸೋಮವಾರ ಎಸ್‌ಕೆಎಸ್‌ಎಸ್‌ಎಫ್ ಸುಳ್ಯ ವಲಯ ಸಮಿತಿ ವತಿಯಿಂದ ನಡೆದ ಮುಸ್ಲಿಂ ಸಮುದಾಯದ ವಿರುದ್ಧ ನಿರಂತರ ವಾಗಿ ನಡೆಯುತ್ತಿರುವ ದೌರ್ಜನ್ಯ , ಪ್ರಚೋದನಕಾರಿ ಹೇಳಿಕೆ ಮತ್ತು ಪ್ರವಾದಿ ಅವರ ನಿಂದನೆಯ ವಿರುದ್ಧ ಸುಳ್ಯದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರೂ, ಕಾಂಗ್ರೆಸ್ ಮುಖಂಡ ಟಿ.ಎಂ ಶಹೀದ್ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯಿತಿ ಸದಸ್ಯ ಉಮರ್ ಕೆ.ಎಸ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಸುಳ್ಯ ವಲಯ ಕಾರ್ಯದರ್ಶಿ ಅಕ್ಬರ್ ಕರಾವಳಿ, ಮದ್ರಸ ಮೆನೇಜ್ಮೆಂಟ್ ಕೋಶಾಧಿಕಾರಿ ಹಮೀದ್ ಹಾಜಿ, ಶಂಸುಲ್ ಉಲಮಾ ಟ್ರಸ್ಟ್ ಮುಖಂಡರಾದ ಅಬೂಬಕ್ಕರ್ ಬೆಳ್ಳಾರೆ, ಅಬ್ದುಲ್ ಖಾದರ್ ಬಯಂಬಾಡಿ, ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಕಾದರ್ ಫೈಝಿ, ನಗರ ಪಂಚಾಯಿತಿ ಸದಸ್ಯ ಶರೀಫ್ ಕಂಠಿ, ಹಾಜಿ ಇಬ್ರಾಹಿಂ ಮಂಡೆಕೋಲು, ಅಡ್ವಕೇಟ್ ಫವಾರ್, ಸುಳ್ಯ ವಿಖಾಯ ಚೇರ್ಮನ್ ಷರೀಫ್ ಅಜ್ಜಾವರ ಉಪಸ್ಥಿತರಿದ್ದರು. ಸುಳ್ಯ ವಲಯಾಧ್ಯಕ್ಷ ಜಮಾಲ್ ಬೆಳ್ಳಾರೆ ಸ್ವಾಗತಿಸಿ ವಂದಿಸಿದರು, ಬಶೀರ್ ಯು.ಪಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News