ಕ್ಯಾಲಿಫೋರ್ನಿಯಾದ ವಸತಿಪ್ರದೇಶದಲ್ಲಿ ಸಣ್ಣ ವಿಮಾನ ಪತನ: ಇಬ್ಬರು ಮೃತ್ಯು

Update: 2021-10-12 07:13 GMT

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾ ನಗರದ ವಸತಿ ಪ್ರದೇಶದಲ್ಲಿ ಸೋಮವಾರ ಸಣ್ಣ ವಿಮಾನ ವೊಂದು ಪತನಗೊಂಡ ಪರಿಣಾಮವಾಗಿ ಎರಡು ಮನೆಗಳು ಹಾಗೂ  ಹಲವಾರು ವಾಹನಗಳು ಬೆಂಕಿಗಾಹುತಿಯಾಗಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ.

ಸೆಸ್ನಾ 340 ಕಂಪೆನಿಗೆ ಸೇರಿರುವ  ವಿಮಾನವು ಎರಡು-ಎಂಜಿನ್ ಹಾಗೂ ಆರು ಆಸನಗಳನ್ನು ಹೊಂದಿತ್ತು ಎಂದು ಫಾಕ್ಸ್ 5 ಸ್ಯಾನ್ ಡಿಯಾಗೋ ವರದಿ ಮಾಡಿದೆ. ವಿಮಾನವು ಅರಿಝೋನಾದ ಯುಮಾದಿಂದ ಹೊರಟಿತ್ತು.

ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಜಸ್ಟಿನ್ ಮತ್ಸುಶಿತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News