ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದಿಂದ ಸವಣಾಲು ಹಿರಿಯ ಪ್ರಾಥಮಿಕ ಶಾಲಾ ಪರಿಸರ ಸ್ವಚ್ಛತೆ

Update: 2021-10-12 09:30 GMT

ಬೆಳ್ತಂಗಡಿ, ಅ.12: ಬೆಳ್ತಂಗಡಿ ವಲಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ವತಿಯಿಂದ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.

ಕೊರೋನ ಕಾರಣದಿಂದ ಮುಚ್ಚಲ್ಪಟ್ಟಿದ್ದ ಶಾಲೆಯ ಸುತ್ತಮುತ್ತಲು ಬೆಳೆದಿದ್ದ ಗಿಡ ಗಂಟೆಗಳಿಂದ ಕೂಡಿದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಈ ವೇಳೆ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ವಿಖಾಯ ತಂಡದ ಕಾರ್ಯವನ್ನು ಶ್ಲಾಘಿಸಿದರು.

ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಅಧ್ಯಕ್ಷ ನಝೀರ್ ಅಝ್ಹರಿ, ಶಾಲಾ ಸಂಚಾಲಕ ಸುರೇಶ್ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ನಾಯ್ಕ, ನಿವೃತ್ತ ಅಧ್ಯಾಪಕರಾದ ಹೇಮಣ್ಣ, ಸಿರಾಜ್ ಚಿಲಿಂಬಿ, ಸ್ಥಳೀಯ ವಿಖಾಯ ನಾಯಕರಾದ ಉಸ್ಮಾನ್ ಸವಣಾಲು, ಅಬ್ದುರ್ರಹ್ಮಾನ್, ಹಸನಬ್ಬ, ಟಿ.ಕೆ.ಸೈಯದ್, ವಲಯ ವಿಖಾಯ ನಾಯಕರಾದ ಅಬೂಬಕರ್ ಬಂಗೇರಕಟ್ಟೆ, ಯೂಸುಫ್ ಪುಂಜಿಲ, ರಝಾಕ್ ಬರೆಮೇಲು,ಶಿಹಾಬುದ್ದೀನ್ ಜಾರಿಗೆಬೈಲು ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News