ಈಜು ಸ್ಪರ್ಧೆ: ಗೋಪಾಲ್ ಖಾರ್ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2021-10-12 15:22 GMT

ಕೋಟ, ಅ.12: ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಶನ್ ನಡೆಸಿದ 22ನೆಯ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿ ಸಿದ ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ ಕನ್ಯಾಣ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

ಇವರು 100ಮೀ ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, 200 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಚಿನ್ನದ ಪದಕ, 4್ಡ50ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕ, 4್ಡ50ಮೀ ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕ, 100 ಮೀ. ಬಟರ್ ಫ್ಲೈನಲ್ಲಿ ಬೆಳ್ಳಿ ಪದಕ, 50ಮೀ ಫ್ರೀ ಸ್ಟೈಲ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರು ಉಡುಪಿಯ ಅಜ್ಜರಕಾಡು ಈಜುಕೊಳದ ತರಬೇತುದಾರರಾಗಿದ್ದಾರೆ.

2013ರಲ್ಲಿ ಕೈಕಾಲುಗಳಿಗೆ ಕೋಳದಿಂದ ಬಂಧಿಸಿಕೊಂಡು ಅರಬ್ಬಿ ಸಮುದ್ರ ದಲ್ಲಿ 3.71 ಕಿ.ಮೀ ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಸಂದೇಶ ಪ್ರಶಸ್ತಿ ಇನ್ನಿತರ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ. ಕರ್ಣಾಟಕ ರಾಜ್ಯದ ಒಂಬತ್ತನೆಯ ತರಗತಿಯ ಕೊಂಕಣಿ ಪಠ್ಯಪುಸ್ತಕದಲ್ಲಿ ಇವರ ಜೀವನ ಚರಿತ್ರೆಯ ಪಾಠವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News