ಶಿರ್ವ: ಬಾವಿಗೆ ಹಾರಿ ಸಾಫ್ಟ್ ವೇರ್ ಉದ್ಯಮಿ ಆತ್ಮಹತ್ಯೆ

Update: 2021-10-12 16:58 GMT

ಶಿರ್ವ, ಅ.12: ವೈಯಕ್ತಿಕ ಕಾರಣದಿಂದ ಮನನೊಂದ ಸಾಫ್ಟ್ ವೇರ್ ಉದ್ಯಮಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಮಂಗಳವಾರ ಸಂಜೆ ಶಿರ್ವದ ನೆಕ್ಕರೆ ಎಂಬಲ್ಲಿ ನಡೆದಿದೆ.

ಮೃತರನ್ನು ನೆಕ್ಕರೆ ನಿವಾಸಿ ಸೈಮನ್ ಡಿಸೋಜ (57) ಎಂದು ಗುರುತಿಸಲಾಗಿದೆ.

ಕಳೆದ 25ವರ್ಷಗಳಿಂದ ಸೌದಿ ಅರೆಬಿಯಾದಲ್ಲಿ ಸಾಫ್ಟ್‌ವೇರ್ ಉದ್ಯಮ ನಡೆಸುತ್ತಿದ್ದ ಇವರು, 6 ತಿಂಗಳ ಹಿಂದೆ ರಸ್ತೆ ಅಫಘಾತದಿಂದ ಗಾಯಗೊಂಡು ಯಾವುದೇ ಕೆಲಸವನ್ನು ಮಾಡಲಾಗದೆ ಮನೆಯಲ್ಲಿಯೇ ಇದ್ದರು. ಇದೇ ಚಿಂತೆಯಲ್ಲಿ ಅವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಪಾಂಬೂರು ಮಾನಸ ಪುನರ್ವಸತಿ ಕೇಂದ್ರದ ಆಡಳಿತ ಮಂಡಳಿ ಸದಸ್ಯರಾಗಿ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News