×
Ad

ಆದಿತ್ಯನಾಥ್,ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು:ಶರದ್ ಪವಾರ್

Update: 2021-10-13 15:31 IST

ಮುಂಬೈ: ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಬುಧವಾರ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು "ಕಾಶ್ಮೀರದಲ್ಲಿ ಚೀನಾದ ಒಳಗೊಳ್ಳುವಿಕೆ ಹೆಚ್ಚಾಗಿದೆ. ಅದೇ ರೀತಿ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲೂ ಚೀನಾ ಹಸ್ತಕ್ಷೇಪವಿದೆ. ಈ ಸಮಯದಲ್ಲಿ ನಾವು ಚೀನಾದಿಂದ ಸುತ್ತುವರಿದಿರುವಂತೆ ಕಾಣುತ್ತೇವೆ''ಎಂದು ಎನ್‌ಸಿಪಿ ನಾಯಕ  ಹೇಳಿದರು.

"ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರ ಸರಕಾರವನ್ನು ಅಸ್ಥಿರಗೊಳಿಸಲು ವಿಫಲವಾದ ನಂತರ ಕೇಂದ್ರವು ಈಗ ಮೈತ್ರಿ ಸರಕಾರದ ಕುಟುಂಬ ಸದಸ್ಯರು ಹಾಗೂ  ನಾಯಕರ ನಿಕಟ ಸಹವರ್ತಿಗಳನ್ನು ಗುರಿಯಾಗಿಸುವ ಹೊಸ ತಂತ್ರವನ್ನು ಬಳಸಲು ಆರಂಭಿಸಿದೆ. ಈ ವಿಷಯಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ'' ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News