×
Ad

ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Update: 2021-10-13 17:59 IST

ಮುಂಬೈ: ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್ ಸಿಬಿ ವಶದಲ್ಲಿರುವ ಶಾರೂಖ್ ಖಾನ್ ಹಾಗೂ ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅ.2ರಂದು ಇತರ 7 ಮಂದಿಯ ಜೊತೆಗೆ ಬಂಧಿಸಲಾಗಿದ್ದು, ಜಾಮೀನು ಕೋರಿ ಆರ್ಯನ್ ಖಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂಬೈ ನ್ಯಾಯಾಲಯವು ಗುರುವಾರಕ್ಕೆಮುಂದೂಡಿದೆ.

ಆರ್ಯನ್ ಖಾನ್ ಗೆ ಜಾಮೀನು ನೀಡುವುದಕ್ಕೆ ಇಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ ಜಿ)ಅನಿಲ್ ಸಿ. ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿಯನ್ನು ಆಲಿಸುತ್ತಿರುವ ವಿಶೇಷ ನ್ಯಾಯಾಲಯ ಗುರುವಾರ ವಿಚಾರಣೆ ಮುಂದುವರಿಸಲು ನಿರ್ಧರಿಸಿದೆ.

ಹಿರಿಯ ವಕೀಲ ಅಮಿತ್ ದೇಸಾಯಿ  ಅವರು ಆರ್ಯನ್ ಖಾನ್ ಪರ ವಾದಿಸಿದರು. ಬಂಧಿತರು ಸಣ್ಣ ವಯಸ್ಸಿನವರು. ಹಲವು ದೇಶಗಳಲ್ಲಿ ಈ ವಸ್ತುಗಳು ಕಾನೂನುಬದ್ಧವಾಗಿದೆ. ಬಂಧಿತರು ಸಾಕಷ್ಟು ಕಷ್ಟವನ್ನು ಅನುಭವಿಸುವ ಜೊತೆಗೆ ಪಾಠವನ್ನು ಕಲಿತ್ತಿದ್ದಾರೆ. ಅವರು ಪೆಡ್ಲರ್, ದರೋಡೆಕೋರರು ಅಥವಾ ಕಳ್ಳಸಾಗಾಣಿಕೆದಾರರಲ್ಲ ಎಂದು ದೇಸಾಯಿ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News