ಖಾದಿ ವಸ್ತ್ರ ಕಡ್ಡಾಯ ಮಾಡಲಿ

Update: 2021-10-14 04:46 GMT

ವಾನ್ಯರೇ,

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಖಾದಿ ಉದ್ಯಮವನ್ನು ಉತ್ತೇಜಿಸುವ ಮತ್ತು ಗಾಂಧೀಜಿಯವರ ಪ್ರೀತಿಯ ಖಾದಿ ವಸ್ತುಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ರಾಜ್ಯ ಸರಕಾರದ ಸರಕಾರಿ ನೌಕರರಿಗೆ ಕಡ್ಡಾಯವಾಗಿ ಖಾದಿ ವಸ್ತ್ರಗಳನ್ನೇ ಧರಿಸಬೇಕೆಂಬ ಆದೇಶವನ್ನು ಮಾಡಬೇಕು. ಹಾಗೆಯೇ ಪೊಲೀಸ್ ಇಲಾಖೆಯ ಸಿಬ್ಬಂದಿಗೆ, ಶಿಕ್ಷಕರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೂ ಖಾದಿ ಸಮವಸ್ತ್ರಗಳನ್ನೇ ಬಳಸಬೇಕೆಂಬ ಆದೇಶವನ್ನು ಸರಕಾರ ಹೊರಡಿಸಲಿ. ಇದರಿಂದ ಲಕ್ಷಾಂತರ ನೌಕರರು ಖಾದಿ ವಸ್ತ್ರಗಳನ್ನು ಬಳಸುವಂತಾಗುತ್ತದೆ. ಖಾದಿ ವಸ್ತ್ರಗಳ ಮಾರಾಟವು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಇದರಿಂದ ನಮ್ಮ ನೇಕಾರರಿಗೆ ಯಾವುದೇ ರೀತಿಯ ಸರಕಾರದ ಹಣಕಾಸಿನ ಖರ್ಚಿಲ್ಲದೆ ಅವರ ಬದುಕಿಗೆ ಪೂರಕವಾಗುವಂತಹ ವಾತಾವರಣ ನಿರ್ಮಾಣವಾಗುತ್ತದೆ. ದೇಶಪ್ರೇಮ ಮತ್ತು ನೇಕಾರರ ಬದುಕಿಗೆ ನೆರವಾಗುವ ದೃಷ್ಟಿಯಿಂದ ಸರಕಾರ ಆದೇಶ ಕೊಟ್ಟರೆ ಸರಕಾರಿ ನೌಕರರು ಅಥವಾ ಸರಕಾರದ ಅನುದಾನದಿಂದ ಅವಲಂಬಿತರಾಗಿರುವ ನೌಕರರು ಗೌರವದಿಂದ ಒಪ್ಪಿ ಅನುಷ್ಠಾನಗೊಳಿಸಬೇಕು. ಹಾಗೆಯೇ ರಾಜಕೀಯ ಪಕ್ಷದ ಎಲ್ಲಾ ಹಂತದ ಕಾರ್ಯಕರ್ತರು, ನಾಯಕರು ಖಾದಿ ಬಟ್ಟೆಯನ್ನು ಬಳಸಬೇಕೆಂಬ ನಿರ್ಧಾರಕ್ಕೆ ಆಯಾ ಪಕ್ಷದ ಅಧ್ಯಕ್ಷರು ಬದ್ಧತೆಯನ್ನು ಪ್ರದರ್ಶಿಸಬೇಕು. ಗಾಂಧಿಯನ್ನು ಪ್ರೀತಿಸುವುದು ಎಂದರೆ ಭಾವಚಿತ್ರಕ್ಕೆ ಕೇವಲ ಹೂವು ಅರ್ಪಿಸುವುದಲ್ಲ. ಅವರ ಆಶಯಗಳನ್ನು ಉಳಿಸಿಕೊಂಡು ಹೋಗಬೇಕಾದದ್ದು ನಿಜವಾದಂತಹ ಕರ್ತವ್ಯವಾಗಿರುತ್ತದೆ.

-ಕೆ.ಎಸ್. ನಾಗರಾಜ್,

ಹನುಮಂತನಗರ, ಬೆಂಗಳೂರು

Writer - -ಕೆ.ಎಸ್. ನಾಗರಾಜ್,

contributor

Editor - -ಕೆ.ಎಸ್. ನಾಗರಾಜ್,

contributor

Similar News