×
Ad

ಜಾಗತಿಕ ಹಸಿವು ಸೂಚ್ಯಂಕ: ನೇಪಾಳ, ಪಾಕಿಸ್ತಾನಕ್ಕಿಂತ ಹಿಂದೆ ಸರಿದ ಭಾರತ 101ನೇ ಸ್ಥಾನಕ್ಕೆ !

Update: 2021-10-15 12:29 IST

ಹೊಸದಿಲ್ಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿದ್ದ ಭಾರತವು ಕುಸಿತ ಕಂಡು 116 ದೇಶಗಳ ಪೈಕಿ 101ನೇ ಸ್ಥಾನಕ್ಕೆ ತಲುಪಿದೆ. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಭಾರತ ಹಿಂದುಳಿದಿದೆ ಎಂದು ಎಂದು ವರದಿ ತಿಳಿಸಿದೆ. ಚೀನಾ, ಬ್ರೆಝಿಲ್‌ ಮತ್ತು ಕುವೈಟ್‌ ಸೇರಿದಂತೆ 18 ದೇಶಗಳು ಐದಕ್ಕಿಂತ ಕಡಿಮೆ ಅಂಕಗಳನ್ನು ಪಡೆದು ಅಗ್ರಶ್ರೇಣಿ ಹಂಚಿಕೊಂಡಿವೆ ಎಂದು ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವಿನ ಸೂಚ್ಯಂಕದ ವೆಬ್‌ಸೈಟ್ ಗುರುವಾರ ಹೇಳಿದೆ.

ಐರಿಶ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ತಯಾರಿಸಿದ ವರದಿಯು ಭಾರತದಲ್ಲಿ ಹಸಿವಿನ ಮಟ್ಟವನ್ನು "ಆತಂಕಕಾರಿ" ಎಂದು ಬಣ್ಣಿಸಿದೆ. 2020 ರಲ್ಲಿ, 107 ದೇಶಗಳಲ್ಲಿ ಭಾರತ 94 ನೇ ಸ್ಥಾನದಲ್ಲಿದೆ. ಈಗ 116 ದೇಶಗಳು ಕಣದಲ್ಲಿದ್ದು, ಭಾರತ 101 ನೇ ಸ್ಥಾನಕ್ಕೆ ಕುಸಿದಿದೆ.

ನೆರೆಯ ರಾಷ್ಟ್ರಗಳಾದ ನೇಪಾಳ (76), ಬಾಂಗ್ಲಾದೇಶ (76), ಮ್ಯಾನ್ಮಾರ್ (71) ಮತ್ತು ಪಾಕಿಸ್ತಾನ (92) ಕೂಡ 'ಆತಂಕಕಾರಿ' ಹಸಿವಿನ ವರ್ಗದಲ್ಲಿವೆ, ಆದರೆ ಭಾರತಕ್ಕಿಂತ ತನ್ನ ನಾಗರಿಕರಿಗೆ ಆಹಾರ ನೀಡುವಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ವರದಿ ತಿಳಿಸಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News