ಸಿಂಘು ಗಡಿಯಲ್ಲಿ ವ್ಯಕ್ತಿಯೊಬ್ಬನ ಹತ್ಯೆ:ರೈತ ನಾಯಕ ಟಿಕಾಯತ್ ರನ್ನು ದೂಷಿಸಿದ ಅಮಿತ್ ಮಾಳವೀಯ

Update: 2021-10-15 08:01 GMT
photo: twitter

ಹೊಸದಿಲ್ಲಿ: ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದ ಬಳಿ ವ್ಯಕ್ತಿಯೊಬ್ಬ ಇಂದು ಬೆಳಗ್ಗೆ ಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಬಿಜೆಪಿ ಮಾಹಿತಿ ಹಾಗೂ  ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ಈ ಕುರಿತಂತೆ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ದೂಷಿಸಿದರು.

"ರಾಕೇಶ್ ಟಿಕಾಯತ್  ಅವರು ಲಖಿಂಪುರದಲ್ಲಿ ಗುಂಪು ಹತ್ಯೆಯನ್ನು ಸಮರ್ಥಿಸದೇ ಇರುತ್ತಿದ್ದರೆ, ಇಂತಹ ಘೋರ ಹತ್ಯೆ ಸಂಭವಿಸುತ್ತಿರಲಿಲ್ಲ. ಕಿಸಾನ್ ಆಂದೋಲನದ ಹೆಸರಲ್ಲಿ ಈ ರೀತಿಯ ಅರಾಜಕತೆ ನಡೆಸುವ ಜನರು ಯಾರು? ಅದನ್ನು ಬಹಿರಂಗಪಡಿಸಬೇಕಾಗಿದೆ'' ಎಂದು ಮಾಳವೀಯ ಹೇಳಿದರು.

ರಾಕೇಶ್ ಟಿಕಾಯತ್  ಇತ್ತೀಚೆಗೆ  ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದಿರುವುದು ಕೇವಲ "ಕ್ರಿಯೆಗೆ ತಕ್ಕ ಪ್ರತಿಕ್ರಿಯೆ" ಎಂದು ಹೇಳಿದ್ದರು.

ಅಕ್ಟೋಬರ್ 3 ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಉದ್ಯೋಗಿ ಹಾಗೂ  ಒಬ್ಬ ಸ್ಥಳೀಯ ವರದಿಗಾರನನ್ನು ಹತ್ಯೆಗೈಯ್ಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News