ಪೂರ್ಣಾವಧಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ 2022ರ ಸೆಪ್ಟೆಂಬರ್ ವೇಳೆಗೆ ಚುನಾವಣೆ:ವರದಿ

Update: 2021-10-16 07:33 GMT

ಹೊಸದಿಲ್ಲಿ: ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಪೂರ್ಣಾವಧಿ ಕಾಂಗ್ರೆಸ್ ಅಧ್ಯಕ್ಷರು ಹಾಗೂ  ಹೊಸ ಪದಾಧಿಕಾರಿಗಳ ತಂಡಕ್ಕೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ದಿಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

 ಮುಂದಿನ ವರ್ಷ ಅನೇಕ ಅಸೆಂಬ್ಲಿ ಚುನಾವಣೆಗಳಿಗೆ ಮುಂಚಿತವಾಗಿ ಹೊಸ ಸದಸ್ಯತ್ವ ಅಭಿಯಾನವನ್ನು ಒಳಗೊಂಡಂತೆ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಸಿಡಬ್ಲ್ಯೂಸಿ ಇನ್ನಷ್ಟೇ ಅನುಮೋದಿಸಬೇಕಾಗಿದೆ, ಆದರೆ ಆ ಅನುಮೋದನೆಯು ಔಪಚಾರಿಕತೆಯೆಂದು ನಿರೀಕ್ಷಿಸಲಾಗಿದೆ.

2019 ರಲ್ಲಿ ರಾಹುಲ್ ಗಾಂಧಿಯವರ ರಾಜೀನಾಮೆಯ ನಂತರ  ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ  ಅವರು  ಸದಸ್ಯತ್ವ ಅಭಿಯಾನ ಹಾಗೂ ಆಂತರಿಕ ಚುನಾವಣೆಗಳು ಮುಗಿಯುವವರೆಗೂ ಆ ಸ್ಥಾನದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

ಅಧ್ಯಕ್ಷ ಸ್ಥಾನಕ್ಕೆ ಮಧ್ಯಂತರ ಚುನಾವಣೆಯನ್ನು ಸಿಡಬ್ಲ್ಯೂಸಿ ವಿರೋಧಿಸಿದೆ.  ಏಕೆಂದರೆ ಪಕ್ಷದ ಗಮನವು ಮುಂದಿನ ವರ್ಷದ ಪಂಜಾಬ್, ಗುಜರಾತ್, ಉತ್ತರಪ್ರದೇಶ, ಗೋವಾ ಹಾಗೂ ಇತರ ರಾಜ್ಯಗಳ ಚುನಾವಣೆಗಳ ಮೇಲೆ ಇರಬೇಕು ಎಂದು ಅನೇಕರು ಭಾವಿಸಿದ್ದಾರೆ.  'ಮಧ್ಯಂತರ' ನಾಯಕನ ಮುಂದುವರಿದ ಸಮಸ್ಯೆ ವಿಧಾನಸಭಾ ಚುನಾವಣೆಗೆ ತಯಾರಿ ಪ್ರಯತ್ನಗಳಿಗೆ ಮಾತ್ರ ಅಡ್ಡಿಯಾಗುತ್ತದೆ ಎಂದು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News