ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ‘ಬದ್ರಿಯಾ ರೆಸಿಡೆನ್ಸಿ’ ಉದ್ಘಾಟನೆ

Update: 2021-10-16 17:27 GMT

ಮಂಗಳೂರು, ಅ.16: ದಾನಿಗಳು ಹಾಗೂ ಜಮಾಅತ್ ಸಹಕಾರದಲ್ಲಿ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ನೂತನ ಸಂಕೀರ್ಣ ಬದ್ರಿಯಾ ರೆಸಿಡೆನ್ಸಿ ಶುಕ್ರವಾರ ಉದ್ಘಾಟನೆಗೊಂಡಿತು.

ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ, ಮನಪಾ ಸದಸ್ಯ ಅಬ್ದುಲ್ ರವೂಫ್ ಸಂಕೀರ್ಣ ಉದ್ಘಾಟಿಸಿದರು. ಮಸೀದಿಯ ಖತೀಬ್ ಪಿ.ಎಸ್. ಮುಹಮ್ಮದ್ ಸಖಾಫಿ ದುಆಗೈದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಕೆ.ಇ. ಅಶ್ರಫ್, ಬಜಾಲ್ ನಂತೂರು ಬದ್ರಿಯಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಡಿ.ಕೆ. ಅಬ್ದುಲ್ ಹಮೀದ್, ಬಿ.ಎನ್. ಅಬ್ಬಾಸ್ ಹಾಜಿ, ಮಾಜಿ ತಾಪಂ ಸದಸ್ಯ ಅಹ್ಮದ್ ಬಾವ, ದಾನಿ ಜಸ್ಬಿರುದ್ದೀನ್, ಮಸೀದಿಯ ಮಾಜಿ ಕಾರ್ಯದರ್ಶಿ ಮೊಹಿಯುದ್ದೀನ್ ಕುಂಞಿ, ಉಪಾಧ್ಯಕ್ಷ ಎಸ್.ಎಚ್. ಹನೀಫ್ ಹಾಜಿ, ಅಶ್ರಫ್ ತೋಟ, ಸಂಚಾಲಕ ಬಿ.ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಅಬ್ದುಲ್ ಸಲಾಂ, ಉಸ್ತುವಾರಿಗಳಾದ ನಝೀರ್ ಬಜಾಲ್, ಹಸನಬ್ಬ, ಫೈಸಲ್‌ನಗರ ಗೌಸಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಆರ್. ರಫೀಕ್, ಶಾಂತಿನಗರ ತರ್ಬಿಯತುಲ್ ಇಸ್ಲಾಂ ಮಸೀದಿಯ ಅಧ್ಯಕ್ಷ ಇಕ್ಬಾಲ್, ಸದಸ್ಯರಾದ ಹನೀಫ್ ಬೈಕಂಪಾಡಿ, ಇಕ್ಬಾಲ್ ಅಹ್ಸನಿ, ಹನೀಫ್ ಕೆಳಗಿನಮನೆ ಮತ್ತಿತರರು ಉಪಸ್ಥಿತರಿದ್ದರು.

ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ ಶಾಫಿ ಮಿಸ್ಬಾಹಿ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ವಂದಿಸಿದರು. ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬೂಬಕರ್ ಮುಸ್ಲಿಯಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News