ಕಚ್ಚಾ ತೈಲ ಖರೀದಿಗೆ ಭಾರತದಿಂದ 500 ಮಿಲಿಯನ್ ಯುಎಸ್ ಡಾಲರ್ ಸಾಲದ ನಿರೀಕ್ಷೆಯಲ್ಲಿ ಶ್ರೀಲಂಕಾ

Update: 2021-10-17 07:24 GMT
photo: The new indian express

ಕೊಲಂಬೊ: ದ್ವೀಪ ರಾಷ್ಟ್ರದಲ್ಲಿ ತೀವ್ರ ವಿದೇಶಿ ವಿನಿಮಯ ಬಿಕ್ಕಟ್ಟು ಎದುರಾಗಿರುವ ಕಾರಣ  ಶ್ರೀಲಂಕಾ ತನ್ನ ಕಚ್ಚಾ ತೈಲ ಖರೀದಿಗೆ ಪಾವತಿಸಲು ಭಾರತದಿಂದ 500 ಮಿಲಿಯನ್ ಯುಎಸ್ ಡಾಲರ್  ಸಾಲವನ್ನು ಕೋರಿದೆ ಎಂದು ವರದಿಯಾಗಿದೆ.

ದ್ವೀಪ ರಾಷ್ಟ್ರದಲ್ಲಿ ಇಂಧನದ ಪ್ರಸ್ತುತ ಲಭ್ಯತೆಯನ್ನು ಮುಂದಿನ ಜನವರಿವರೆಗೆ ಮಾತ್ರ ಖಾತರಿಪಡಿಸಬಹುದು ಎಂದು ಇಂಧನ ಸಚಿವ ಉದಯ ಗಮ್ಮನ್‌ಪಿಲ ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ ಈ ಹೆಜ್ಜೆ ಇಡಲಾಗಿದೆ.

ಸರಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಎರಡು ಪ್ರಮುಖ ಸರಕಾರಿ ಬ್ಯಾಂಕುಗಳಾದ ಬ್ಯಾಂಕ್ ಆಫ್ ಸಿಲೋನ್ ಮತ್ತು ಪೀಪಲ್ಸ್ ಬ್ಯಾಂಕ್ ಗೆ ಸುಮಾರು 3.3 ಬಿಲಿಯನ್ ಯುಎಸ್ ಡಾಲರ್ ಸಾಲವನ್ನು ಹೊಂದಿದೆ.

ರಾಜ್ಯದ ತೈಲ ವಿತರಕರು ಮಧ್ಯಪ್ರಾಚ್ಯದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಾರೆ ಮತ್ತು ಸಿಂಗಾಪುರ ಸೇರಿದಂತೆ ಇತರ ಪ್ರದೇಶಗಳಿಂದ ಸಂಸ್ಕರಿಸಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಾರೆ.

"ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆ ವ್ಯವಸ್ಥೆ ಅಡಿಯಲ್ಲಿ ಸೌಲಭ್ಯವನ್ನು (500 ಯುಎಸ್ ಡಾಲರ್ ಕ್ರೆಡಿಟ್ ಲೈನ್) ಪಡೆಯಲು ನಾವು ಪ್ರಸ್ತುತ ಭಾರತೀಯ ಹೈಕಮಿಷನ್‌ನೊಂದಿಗೆ ಸಂಪರ್ಕ ದಲ್ಲಿದ್ದೇವೆ" ಎಂದು ಸಿಪಿಸಿ ಅಧ್ಯಕ್ಷ ಸುಮಿತ್ ವಿಜೇಸಿಂಘೆ ಸ್ಥಳೀಯ ಸುದ್ದಿ ವೆಬ್‌ಸೈಟ್ ನ್ಯೂಸ್‌ಫಸ್ಟ್‌ ಗೆ ತಿಳಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಅವಶ್ಯಕತೆಗಳನ್ನು ಖರೀದಿಸಲು ಈ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಭಾರತ ಹಾಗೂ  ಲಂಕಾದ ಇಂಧನ ಕಾರ್ಯದರ್ಶಿಗಳು ಶೀಘ್ರದಲ್ಲೇ ಸಾಲದ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹಣಕಾಸು ಕಾರ್ಯದರ್ಶಿ ಎಸ್. ಆರ್. ಅತ್ತಿಗಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News