ಟ್ವೆಂಟಿ-20 ವಿಶ್ವಕಪ್ ಅಭ್ಯಾಸ ಪಂದ್ಯ:ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ

Update: 2021-10-18 18:06 GMT
photo:twitter/@BCCI

ದುಬೈ, ಅ.18: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಇಶಾನ್ ಕಿಶನ್(70, 46 ಎಸೆತ,7 ಬೌಂಡರಿ, 3 ಸಿಕ್ಸರ್ )ಹಾಗೂ ಕೆ.ಎಲ್.ರಾಹುಲ್(51,24 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತವು ಇಂಗ್ಲೆಂಡ್ ವಿರುದ್ಧ ಸೋಮವಾರ ನಡೆದ ಟ್ವೆಂಟಿ-20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಗೆಲ್ಲಲು 189 ರನ್ ಗುರಿ ಬೆನ್ನಟ್ಟಿದ್ದ ಭಾರತವು 19  ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ(ಔಟಾಗದೆ 12) ಹಾಗೂ ರಿಷಭ್ ಪಂತ್ (ಔಟಾಗದೆ 29) ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನಿಂಗ್ಸ್ ಆರಂಭಿಸಿದ ಕಿಶನ್ ಹಾಗೂ ರಾಹುಲ್ 8.2 ಓವರ್ ಗಳಲ್ಲಿ 82 ರನ್ ಕಲೆಹಾಕಿ ಭರ್ಜರಿ ಆರಂಭ ಒದಗಿಸಿದರು.

ವಿರಾಟ್ ಕೊಹ್ಲಿ(11) ಸೂರ್ಯಕುಮಾರ್ 8 ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಜಾನಿ ಬೈರ್ ಸ್ಟೋವ್ 49 ರನ್ ಹಾಗೂ ಮೊಯಿನ್ ಅಲಿ ಔಟಾಗದೆ 43 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News