ಹರ್ಭಜನ್ ಸಿಂಗ್,ಜಾವಗಲ್ ಶ್ರೀನಾಥ್ ಸೇರಿದಂತೆ 18 ಕ್ರಿಕೆಟಿಗರಿಗೆ ಎಂಸಿಸಿ ಆಜೀವ ಸದಸ್ಯತ್ವ

Update: 2021-10-19 13:11 GMT
photo: Indian express

ಹೊಸದಿಲ್ಲಿ: ಭಾರತದ ಹರ್ಭಜನ್ ಸಿಂಗ್ ಹಾಗೂ  ಜಾವಗಲ್ ಶ್ರೀನಾಥ್ ಸೇರಿದಂತೆ 18 ಕ್ರಿಕೆಟಿಗರಿಗೆ ಮಂಗಳವಾರ ಮೆರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನ ಆಜೀವ ಸದಸ್ಯತ್ವ ನೀಡಲಾಗಿದೆ.

ಹರ್ಭಜನ್ ಹಾಗೂ  ಶ್ರೀನಾಥ್ ಇಬ್ಬರೂ ಉತ್ತಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆನಂದಿಸಿದವರು. ಹರ್ಭಜನ್ ಟೆಸ್ಟ್ ನಲ್ಲಿ ಭಾರತದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದು, 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ ಗಳಿಸಿದ್ದಾರೆ ಹಾಗೂ  700 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.

ಪ್ರಸ್ತುತ ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫ್ರಿ ಆಗಿರುವ ಕನ್ನಡಿಗ ಶ್ರೀನಾಥ್, 315 ಏಕದಿನ ವಿಕೆಟ್ ಹಾಗೂ  236 ಟೆಸ್ಟ್ ವಿಕೆಟ್ ಪಡೆದಿರುವ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರು.

"12 ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಎಂಟು ದೇಶಗಳು ಈ ವರ್ಷದ ಪಟ್ಟಿಯಲ್ಲಿ ಪ್ರತಿನಿಧಿಸಲ್ಪಡುತ್ತವೆ. ಇದು ಆಧುನಿಕ ಆಟದಲ್ಲಿ ಗುರುತಿಸಬಹುದಾದ ಕೆಲವು ಹೆಸರುಗಳನ್ನು ಒಳಗೊಂಡಿದೆ" ಎಂದು ಎಂಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News