ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಬಂಧನ:ವರದಿ

Update: 2021-10-20 07:29 GMT
photo: twitter

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಸ್ಲೇಟರ್ ಅವರನ್ನು ಕೌಟುಂಬಿಕ ದೌರ್ಜನ್ಯದ ಘಟನೆಗೆ ಸಂಬಂಧಿಸಿ ಸಿಡ್ನಿಯಲ್ಲಿ ಬಂಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ಬುಧವಾರ ವರದಿ ಮಾಡಿದೆ.

ಸ್ಲೇಟರ್  ಅವರ ಮ್ಯಾನೇಜರ್ ಸೀನ್ ಆಂಡರ್ಸನ್ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕಳೆದ ವಾರ ಕೌಟುಂಬಿಕ ದೌರ್ಜನ್ಯದ ಘಟನೆಯ ವರದಿಗಳ ಬಗ್ಗೆ ಮಂಗಳವಾರ ತನಿಖೆ ಆರಂಭಿಸಿದ್ದೇವೆ ಎಂದು ನ್ಯೂ ಸೌತ್ ವೇಲ್ಸ್ (ಎನ್ ಎಸ್ ಡಬ್ಲ್ಯು) ಪೊಲೀಸರು ತಿಳಿಸಿದ್ದಾರೆ.

"ವಿಚಾರಣೆಗಳ ನಂತರ ಪತ್ತೆದಾರರು ಮ್ಯಾನ್ಲಿಯ ಮನೆಯಲ್ಲಿ ಬೆಳಿಗ್ಗೆ 9:20 ರ ಸುಮಾರಿಗೆ ಹಾಜರಾದರು ಹಾಗೂ  51 ವರ್ಷದ ವ್ಯಕ್ತಿಯೊಂದಿಗೆ ಮಾತನಾಡಿದರು. ನಂತರ ಅವರನ್ನು ಬಂಧಿಸಿ ಮ್ಯಾನ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ, ”ಎಂದು ಎನ್ ಎಸ್ ಡಬ್ಲ್ಯು ಪೊಲೀಸರು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮಾಜಿ ಓಪನಿಂಗ್ ಬ್ಯಾಟ್ಸ್ ಮನ್ ಸ್ಲೇಟರ್ 1993ರಿಂದ 2001 ರ ತನಕ ಆಸ್ಟ್ರೇಲಿಯಾದ ಪರವಾಗಿ 74 ಟೆಸ್ಟ್ ಹಾಗೂ  42 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾದ ಟಿವಿ ಪರದೆಗಳಲ್ಲಿ 15 ವರ್ಷಗಳ ಕಾಲ ಕ್ರಿಕೆಟ್ ಕಾಮೆಂಟೇಟರ್ ಆಗಿದ್ದರು.

51 ವರ್ಷದ ಸ್ಲೇಟರ್  ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ಮೇ ತಿಂಗಳಲ್ಲಿ ತೀವ್ರ ವಾಗ್ದಾಳಿ ನಡೆಸಿದ ನಂತರ ವಿವಾದಕ್ಕೆ ಸಿಲುಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News