ಕರ್ನಾಟಕದಿಂದ ಪೂರೈಕೆಯಾದ 2,100 ಕೆ.ಜಿ ಗೋಮಾಂಸ ಗೋವಾದಲ್ಲಿ ಪ್ರತಿನಿತ್ಯ ಬಳಕೆ: ಸಿಎಂ ಮಾಹಿತಿ

Update: 2021-10-20 07:47 GMT

ಹೊಸದಿಲ್ಲಿ: ಕರ್ನಾಟಕದ ಮಾಂಸ ಮಾರಾಟಗಾರರಿಂದ ಸರಬರಾಜಾಗುವ 2,100 ಕೆಜಿಗೂ ಅಧಿಕ ಬೀಫ್  ಪ್ರತಿ ದಿನ ಗೋವಾದಲ್ಲಿ ಬಳಕೆಯಾಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯ ವಿಧಾನಸಭೆಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.

ಗೋವಾ ವಿಧಾನಸಭೆಯ ಎರಡು ದಿನದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಅಲೆಕ್ಸೋ ರೆಜಿನಾಲ್ಡೋ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ  ಒದಗಿಸಲಾಗಿದೆ. ಕಳೆದ  ಆರು ತಿಂಗಳುಗಳ ಅವಧಿಯಲ್ಲಿ ಕರ್ನಾಟಕದ ಮಾರಾಟಗಾರರಿಂದ ಗೋವಾ 388 ಟನ್ ಬೀಫ್ ಖರೀದಿಸಿದೆ ಎಂದೂ ಅವರು ತಿಳಿಸಿದ್ದಾರೆ.

ಕರ್ನಾಟಕದಿಂದ ಪ್ರತಿ ದಿನ ಸರಾಸರಿ 2,120 ಬೀಫ್  ಸರಬರಾಜಾಗುತ್ತಿದೆ ಎಂಬುದು ಸರಕಾರ ಸಂಗ್ರಹಿಸಿದ ಮಾಂಸ ಪರಿಶೀಲನೆ ವೆಚ್ಚಗಳಿಂದ ತಿಳಿದು ಬರುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯೆ  ತಡೆ ಮತ್ತು ಸಂರಕ್ಷಣಾ ಕಾಯಿದೆ 2020 ಜಾರಿಯಾದ ನಂತರ ಗೋವಾದಲ್ಲಿ ಹಲವು ತಿಂಗಳುಗಳ ಕಾಲ ಬೀಫ್ ಕೊರತೆ ಎದುರಾಗಿತ್ತು. ಮಹಾರಾಷ್ಟ್ರದಲ್ಲೂ ಇಂತಹುದೇ ಕಾನೂನು ಜಾರಿಯಾದ ನಂತರ ಗೋವಾಗೆ ತಾಜಾ ಬೀಫ್ ಸರಬರಾಜು ಮಾಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಗೋವಾದ ಜನಸಂಖ್ಯೆಯ ಪೈಕಿ ಶೇ 30ಕ್ಕೂ ಅಧಿಕ ಮಂದಿ ಗೋಮಾಂಸ ಸೇವಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News