ಡ್ರಗ್ಸ್ ಪ್ರಕರಣ:ಬಾಂಬೆ ಹೈಕೋರ್ಟ್‌ ಮೊರೆ ಹೋದ ಆರ್ಯನ್ ಖಾನ್

Update: 2021-10-20 12:09 GMT

ಮುಂಬೈ:ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್  ಸಲ್ಲಿಸಿರುವ  ಜಾಮೀನು ಅರ್ಜಿಯನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ತಿರಸ್ಕರಿಸಿದ್ದರ ವಿರುದ್ಧ ಬುಧವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಆರ್ಯನ್ ಅವರ ಮನವಿಯನ್ನು ನ್ಯಾಯಮೂರ್ತಿ ನಿತಿನ್ ಡಬ್ಲ್ಯು ಸಾಂಬ್ರೆ ಅವರ ಏಕ ನ್ಯಾಯಾಧೀಶರ ಪೀಠದ ಮುಂದೆ ಸಮಯದ ಕೊರತೆಯಿಂದಾಗಿ ಉಲ್ಲೇಖಿಸಲು ಸಾಧ್ಯವಾಗದಿದ್ದರೂ, ನಾಳೆ ಬೆಳಿಗ್ಗೆ 10:30 ಕ್ಕೆ ಅದನ್ನು ಉಲ್ಲೇಖಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಆರ್ಯನ್ ಅವರ ಜೊತೆಗೆ ಅರ್ಬಾಝ್ ಮರ್ಚೆಂಟ್ ಹಾಗೂ  ಮುನ್ಮುನ್ ಧಮೇಚಾ ಎಂಬ ಇತರ ಇಬ್ಬರ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಲಯವು ಇಂದು ತಿರಸ್ಕರಿಸಿದೆ.

ಕ್ರೂಸ್ ಹಡಗು ಪ್ರಕರಣದಲ್ಲಿ ಬಂಧಿತರಾಗಿರುವ ಇತರ 12 ಮಂದಿ ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಎನ್‌ಸಿಬಿ ತಮ್ಮ ಉತ್ತರಗಳನ್ನು ಸಲ್ಲಿಸಿದೆ ಹಾಗೂ  ವಿಶೇಷ ನ್ಯಾಯಾಧೀಶ ವಿ.ವಿ .ಪಾಟೀಲ್ ನಾಳೆಯಿಂದ ಇತರ ಆರೋಪಿಗಳ ವಾದಗಳನ್ನು ಆಲಿಸಲಿದ್ದಾರೆ.

ಆರ್ಯನ್ (23 ವರ್ಷ )ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದು,ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಿಂದ ಮಾದಕದ್ರವ್ಯವನ್ನು ವಶಪಡಿಸಿಕೊಂಡ ಬಳಿಕ ಎನ್‌ಸಿಬಿ ಆರ್ಯನ್ ಅವರನ್ನು  ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News