ಟ್ವೆಂಟಿ-20 ವಿಶ್ವಕಪ್ :ಶ್ರೀಲಂಕಾಕ್ಕೆ ಸುಲಭ ತುತ್ತಾದ ಐರ್ಲೆಂಡ್

Update: 2021-10-20 17:41 GMT
photo: AFP

ಅಬುಧಾಬಿ, ಅ.20: ಆಲ್ ರೌಂಡ್ ಪ್ರದರ್ಶನ ನೀಡಿದ ಶ್ರೀಲಂಕಾ ತಂಡವು ಐರ್ಲೆಂಡ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ನ ಮೊದಲ ಸುತ್ತಿನ ಪಂದ್ಯದಲ್ಲಿ 70 ರನ್ ಗಳ ಅಂತರದಿಂದ ಜಯಭೇರಿ ಬಾರಿಸಿದೆ.

ಬುಧವಾರ ನಡೆದ 'ಎ' ಗುಂಪಿನ 8ನೇ ಪಂದ್ಯದಲ್ಲಿ ಗೆಲ್ಲಲು 172 ರನ್ ಗುರಿ ಪಡೆದಿದ್ದ ಐರ್ಲೆಂಡ್ ತಂಡ 18.3  ಓವರ್ ಗಳಲ್ಲಿ ಕೇವಲ 101 ರನ್ ಗೆ ಆಲೌಟಾಯಿತು.

ಶ್ರೀಲಂಕಾದ ಪರವಾಗಿ ಮಹೀಶ್ ತೀಕ್ಷಣ(3-17) ಯಶಸ್ವಿ ಬೌಲರ್ ಎನಿಸಿಕೊಂಡರು. ಚಾಮಿಕಾ ಕರುಣರತ್ನೆ(2-27) ಹಾಗೂ ಲಹಿರು ಕುಮಾರ(2-22) ತಲಾ ಎರಡು ವಿಕೆಟ್ ಗಳನ್ನು ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಲಂಕೆಯ ಪರ ವನಿಂದು ಹಸರಂಗ ಡಿ'ಸಿಲ್ವಾ(71, 47 ಎಸೆತ) ಹಾಗೂ ಪ್ರಥಮ್ ನಿಶಾಂಕ(61, 47 ಎಸೆತ) ಅರ್ಧಶತಕದ ಕೊಡುಗೆ ನೀಡಿದರು. ಜೋಶ್ ಲಿಟ್ಲ್ (4-23) ಹಾಗೂ ಮಾರ್ಕ್ ಅದೈರ್(2-35)6 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News