ಉತ್ತರ ಪ್ರದೇಶ: ಪಿಯುಸಿ ಬಾಲಕಿಯರಿಗೆ ಸ್ಮಾರ್ಟ್‌ ಫೋನ್‌, ಪದವೀಧರ ಯುವತಿಯರಿಗೆ ಸ್ಕೂಟಿ; ಪ್ರಿಯಾಂಕಾ ಗಾಂಧಿ

Update: 2021-10-21 09:06 GMT

ಲಕ್ನೊ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಟಿಕೆಟ್ ನೀಡುವ ಭರವಸೆ ನೀಡಿದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದರು.

ತನ್ನ ಪಕ್ಷ ರಾಜ್ಯದಲ್ಲಿ ಸರಕಾರವನ್ನು ರಚಿಸಿದರೆ  12 ನೇ  ತರಗತಿಯ ಎಲ್ಲಾ ಬಾಲಕಿಯರಿಗೆ ಸ್ಮಾರ್ಟ್‌ಫೋನ್ ನೀಡಲಾಗುವುದು ಹಾಗೂ  ಎಲ್ಲಾ ಪದವೀಧರ ಯುವತಿಯರು ಎಲೆಕ್ಟ್ರಾನಿಕ್ ಸ್ಕೂಟಿಯನ್ನು ಪಡೆಯುತ್ತಾರೆ ಎಂದು ಘೋಷಿಸಿದರು.

"ನಿನ್ನೆ ನಾನು ಕೆಲವು ವಿದ್ಯಾರ್ಥಿನಿಯರನ್ನು ಭೇಟಿಯಾದೆ. ಅವರು ತಮ್ಮ ಅಧ್ಯಯನಕ್ಕೆ ಮತ್ತು ಅವರ ಭದ್ರತೆಗೆ ಸ್ಮಾರ್ಟ್ ಫೋನ್ ಬೇಕು ಎಂದು ಅವರು  ಹೇಳಿದರು. ಇಂದು ಯುಪಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಇಂಟರ್ ಪಾಸ್ ಹುಡುಗಿಯರಿಗೆ ಸ್ಮಾರ್ಟ್ ಫೋನ್ ಗಳನ್ನು ಹಾಗೂ ಪದವೀಧರ ಯುವತಿಯರಿಗೆ ಎಲೆಕ್ಟ್ರಾನಿಕ್ ಸ್ಕೂಟಿಗಳು ನೀಡಲು ನಿರ್ಧರಿಸಿದೆ ಹಾಗೂ ಇಂದು ನನಗೆ ಸಂತೋಷವಾಗಿದೆ "ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News