ಇಂದು 100 ಕೋಟಿ ಡೋಸ್ ಕೋವಿಡ್ ಲಸಿಕೆ: ಹೊಸ ಮೈಲಿಗಲ್ಲನ್ನು ತಲುಪಿದ ಭಾರತ

Update: 2021-10-21 08:48 GMT

ಹೊಸದಿಲ್ಲಿ: ಭಾರತ ಇಂದು ಬೆಳಿಗ್ಗೆ 100   ಕೋಟಿ  ಕೋವಿಡ್ -19 ವ್ಯಾಕ್ಸಿನೇಷನ್ ಮೈಲಿಗಲ್ಲನ್ನು ತಲುಪಿದೆ. ಈ ವರ್ಷ ಭಾರತದ ಎಲ್ಲಾ 944 ಮಿಲಿಯನ್ ವಯಸ್ಕರಿಗೆ ಲಸಿಕೆ ಹಾಕಿಸಬೇಕೆಂದು ಸರಕಾರ ಬಯಸುತ್ತದೆ.

1.3 ಶತಕೋಟಿ ಜನರಿರುವ ದೇಶದ ಮುಕ್ಕಾಲು ಭಾಗದಷ್ಟು ಜನರು ಒಂದು ಡೋಸ್ ಪಡೆದಿದ್ದಾರೆ.  ಹಾಗೂ  ಸುಮಾರು 30 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಎಂದು ಸರಕಾರ ಹೇಳುತ್ತದೆ.

ಮೈಲಿಗಲ್ಲನ್ನು ಗುರುತಿಸಲು ದಿಲ್ಲಿಯ ಆರ್‌ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಅಭಿನಂದಿಸಿದರು ಹಾಗೂ  ಇದನ್ನು "ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ  ವಿಜಯ" ಎಂದು ಕರೆದರು.

ಅತೀ ಹೆಚ್ಚು ಡೋಸ್ ನೀಡಿದ ಐದು ರಾಜ್ಯಗಳೆಂದರೆ  ಉತ್ತರ ಪ್ರದೇಶ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ  ಮಧ್ಯಪ್ರದೇಶಗಳಿವೆ.

ಭಾರತದಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾದ ಕೇವಲ ಒಂಬತ್ತು ತಿಂಗಳಲ್ಲಿ 1 ಬಿಲಿಯನ್ ಡೋಸ್ ಮಾರ್ಕ್ ಅನ್ನು ತಲುಪುವುದು ಗಮನಾರ್ಹವಾಗಿದೆ ಎಂದು ನೀತಿ ಆಯೋಗದ ಸದಸ್ಯ ಮತ್ತು ಸರಕಾರದ ಲಸಿಕೆ ಸಮಿತಿಯ ಮುಖ್ಯಸ್ಥ ವಿಕೆ ಪಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News