ಉಡುಪಿ: ಅ.22ರಂದು ಕೋವಿಡ್-19 ಲಸಿಕಾ ಮಹಾಮೇಳ

Update: 2021-10-21 14:01 GMT
ಸಾಂದರ್ಭಿಕ ಚಿತ್ರ (PTI)

ಉಡುಪಿ, ಅ.21: ಶುಕ್ರವಾರ ಅ.22ರಂದು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆ ಗಳಲ್ಲಿ ಕೋವಿಡ್-19 ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಲಭ್ಯ ವಿರಲಿದೆ. ಎಲ್ಲಾ ಲಸಿಕಾ ಕೇಂದ್ರಗಳಲ್ಲೂ ಬೆಳಗ್ಗೆ 9:00ರಿಂದ ಸಂಜೆ 4:30ರವರೆಗೆ ಲಸಿಕಾಕರಮ ನಡೆಯಲಿದೆ. ಯಾವುದೇ ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಮಾದರಿ ಪರೀಕ್ಷೆ (ಸ್ಕ್ವಾಬ್ ಟೆಸ್ಟ್) ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಥಮ ಅಥವಾ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬಹುದು. ಈವರೆಗೆ ಕೋವಿಡ್ ಲಸಿಕೆ ಪಡೆಯದವರೂ ಸಹ ಲಸಿಕಾ ಕೇಂದ್ರಕ್ಕೆ ಬಂದು ಪ್ರಥಮ ಡೋಸ್ ಪಡೆಯಬಹುದು. ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನ ಮೀರಿದವರು 2ನೇ ಡೋಸ್ ಹಾಗೂ ಕೋವ್ಯಾಕ್ಸಿನ್ ಪ್ರಥಮ ಡೋಸ್ ಪಡೆದು 28 ದಿನ ಮೀರಿದವರು ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆದುಕೊಳ್ಳಬಹುದು.

ಪ್ರಥಮ ಡೋಸ್ ಲಸಿಕೆ ಪಡೆದ ದಿನ ನೆನಪಿಲ್ಲದವರು ಸಹ ಮೊದಲ ಡೋಸ್ ಲಸಿಕೆ ಪಡೆದ ಲಸಿಕಾ ಕೇಂದ್ರಕ್ಕೆ ಆಧಾರ್ ಕಾರ್ಡ್ ಅಥವಾ ಮೊಬೈಲ್‌ನೊಂದಿಗೆ ಬಂದು ಪರಿಶೀಲಿಸಿ 2ನೇ ಡೋಸ್ ಪಡೆದುಕೊಳ್ಳಬಹುದು. ಎರಡನೇ ಡೋಸ್ ಪಡೆಯಲು ತುಂಬಾ ತಡವಾದಲ್ಲಿ ಕೋವಿಡ್‌ನಿಂದ ಆಗುವ ತೊಂದರೆ ಅಧಿಕವಾಗಿರುತ್ತದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News