ಮಂಗಳೂರು ವಕೀಲರ ಸಂಘದ ವೆಬ್‌ಸೈಟ್ ಅನಾವರಣ

Update: 2021-10-21 17:26 GMT

ಮಂಗಳೂರು, ಅ. 21: ಮಂಗಳೂರು ವಕೀಲರ ಸಂಘದ ವೆಬ್‌ಸೈಟ್ ಅನಾವರಣ ಕಾರ್ಯಕ್ರಮವು ಗುರುವಾರ ಗುರುವಾರ ನಗರದ ಹಳೆ ಜಿಲ್ಲಾ ನ್ಯಾಯಾಲಯದ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ವಕೀಲರ ಸಂಘದ ಸದಸ್ಯರಿಗೆ ಲಸಿಕೆ ನೀಡುವಲ್ಲಿ ಸಹಕರಿಸಿದ ವೈದ್ಯಾಧಿಕಾರಿ ಡಾ.ಚಂದ್ರಪ್ರಭಾ, ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡ ಮಮ್ತಾಝ್, ಭ್ರಷ್ಟಾಚಾರ ನಿಗ್ರಹ ದಳದ ಪಶ್ಚಿಮ ವಲಯದ ಎಸ್ಪಿಯಾಗಿ ನೇಮಕಗೊಂಡ ಸೈಮನ್ ಸಿ.ಎ. ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮುರಳೀಧರ ಪೈ ಕೊರೋನ ನಿರೋಧಕ ಲಸಿಕೆಯು ಬಹುಪಾಲು ಮಂದಿಗೆ ತಲುಪಿದ್ದರೂ ಕೂಡ ಜನರು ಮೈಮರೆಯಬಾರದು. ಬಾಕಿ ಉಳಿದವರಿಗೆ ಲಸಿಕೆ ಹಾಕುವುದರ ಜೊತೆಗೆ ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರ ಪಾಲಿಸಬೇಕು, ಸ್ಯಾನಿಟೈಸೇಶನ್ ಮಾಡಿಸಬೇಕು ಎಂದರು.

ವಕೀಲರ ಸಂಘದ ವೆಬ್‌ಸೈಟ್‌ನಲ್ಲಿ ಇ- ಬುಕ್‌ಗಳನ್ನು ಹಾಕಿ ಅವುಗಳು ಎಲ್ಲರಿಗೂ ಲಭಿಸುವಂತೆ ಮಾಡಬಹುದು. ಅಲ್ಲದೆ ಹಿರಿಯ ವಕೀಲರು ತಿಂಗಳಿಗೊಂದು ಅತ್ಯುತ್ತಮ ಲೇಖನವನ್ನು ಬರೆದು ಇದರಲ್ಲಿ ಪ್ರಕಟಿಸಬೇಕು. ಉತ್ತಮ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಲೇಖನಗಳನ್ನೂ ಹಾಕ ಬಹುದು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News