ಐಪಿಎಲ್ ಪ್ರಸಾರ ಹಕ್ಕಿನಿಂದ ಬಿಸಿಸಿಐಗೆ 37,500 ಕೋಟಿ ರೂ.

Update: 2021-10-21 18:24 GMT

ಮುಂಬೈ, ಅ. 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರಸಾರ ಹಕ್ಕು (ಟಿವಿ ಮತ್ತು ಡಿಜಿಟಲ್)ಗಳಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಂದಿನ ಐದು ವರ್ಷಗಳ (2023-2027) ಅವಧಿಯಲ್ಲಿ ಐದು ಬಿಲಿಯ ಡಾಲರ್ (ಸುಮಾರು 37,500 ಕೋಟಿ ರೂಪಾಯಿ)ನಷ್ಟು ಬೃಹತ್ ಮೊತ್ತವನ್ನು ಗಳಿಸಲಿದೆ.

 ಐಪಿಎಲ್‌ನ ಹಾಲಿ 5 ವರ್ಷಗಳ ಪ್ರಸಾರ ಹಕ್ಕನ್ನು (2018-2022 ಅವಧಿಯ ಟಿವಿ ಮತ್ತು ಡಿಜಿಟಲ್ ಪ್ರಸಾರ) ಸ್ಟಾರ್ ಇಂಡಿಯಾ ಹೊಂದಿದೆ. ಈ ಹಕ್ಕನ್ನು ಸ್ಟಾರ್ ಇಂಡಿಯಾವು 2.55 ಬಿಲಿಯ ಡಾಲರ್ (ಸುಮಾರು 16,350 ಕೋಟಿ ರೂಪಾಯಿ)ಗೆ ಪಡೆದುಕೊಂಡಿದೆ. ಆದರೆ ಮುಂದಿನ ಐದು ವರ್ಷಗಳ ಅವಧಿಗೆ ವೌಲ್ಯವು ದ್ವಿಗುಣಕ್ಕಿಂತಲೂ ಜಾಸ್ತಿಯಾಗಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News