ನ್ಯಾಯಾಧಿಕರಣಗಳು ಅಗತ್ಯ ಇಲ್ಲದಿದ್ದರೆ, ಗ್ರಾಹಕರ ರಕ್ಷಣಾ ಕಾಯ್ದೆ ರದ್ದುಗೊಳಿಸಿ: ಸುಪ್ರೀಂ ಕೋರ್ಟ್

Update: 2021-10-22 16:18 GMT

ಹೊಸದಿಲ್ಲಿ, ಅ. 22: ಗ್ರಾಹಕರ ವಿವಾದಗಳನ್ನು ಪರಿಹರಿಸುವ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನ್ಯಾಯಾಧಿಕರಣಗಳಲ್ಲಿ ಖಾಲಿ ಹುದ್ದೆ ತುಂಬವಲ್ಲಿನ ವಿಳಂಬದ ಕುರಿತಂತೆ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರಕ್ಕೆ ನ್ಯಾಯಾಧಿಕರಣಗಳು ಅಗತ್ಯ ಇಲ್ಲದೇ ಇದ್ದರೆ, ಅದು ಗ್ರಾಹಕರ ರಕ್ಷಣಾ ಕಾಯ್ದೆಯನ್ನು ತೆಗೆದುಹಾಕಬೇಕು ಎಂದಿದೆ.

ಖಾಲಿ ಇರುವ ಹುದ್ದೆಗಳನ್ನು ತುಂಬಲಾಗಿದೆಯೇ ಇಲ್ಲವೇ ಎಂದು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿರುವುದು ದುರಾದೃಷ್ಟಕರ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ಪೀಠ ಹೇಳಿದೆ. ರಾಜ್ಯ, ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ನ್ಯಾಯಾಧಿಕರಣಗಳ ಅಧ್ಯಕ್ಷರು ಹಾಗೂ ಸದಸ್ಯರು /ಸಿಬ್ಬಂದಿ ನಿಯೋಜನೆ ಹಾಗೂ ದೇಶಾದ್ಯಂತ ಮೂಲಭೂತ ಸೌಕರ್ಯದ ಕೊರತೆ ಕುರಿತು ಕೇಂದ್ರ ಸರಕಾರದ ನಿಷ್ಕ್ರಿಯತೆಯ ಬಗ್ಗೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ‌

ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಹಿಂದಿನ ತನ್ನ ನಿರ್ದೇಶನದಂತೆ ರಾಜ್ಯ ಗ್ರಾಹಕರ ಆಯೋಗದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಿರ್ದಿಷ್ಟ ಗ್ರಾಹಕರ ರಕ್ಷಣಾ ನಿಯಮವನ್ನು ರದ್ದುಗೊಳಿಸಿ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನಿಂದ ಅಡ್ಡಿ ಉಂಟಾಗಬಾರದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News