ಅಮಿತ್ ಶಾ ಅವರ ಜಮ್ಮು-ಕಾಶ್ಮೀರ ಭೇಟಿಗೆ ಮುಂಚಿತವಾಗಿ ಸ್ನೈಪರ್‌, ಡ್ರೋನ್‌, ಶಾರ್ಪ್‌ಶೂಟರ್‌ಗಳ ನಿಯೋಜನೆ

Update: 2021-10-23 06:09 GMT

ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚಿನ ವಾರಗಳಲ್ಲಿ ಉದ್ದೇಶಿತ ನಾಗರಿಕ ಹತ್ಯೆಗಳ ನಂತರ ಹೆಚ್ಚಿನ ಭದ್ರತೆಯ ನಡುವೆ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗಾಗಿ ಇಂದು ಶ್ರೀನಗರಕ್ಕೆ ಆಗಮಿಸಲಿದ್ದಾರೆ.

ಆಗಸ್ಟ್ 5, 2019 ರಂದು 370 ನೇ ವಿಧಿಯನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶ ರಚನೆಯಾದ ನಂತರ ಕೇಂದ್ರ ಸಚಿವರ ಮೊದಲ ಭೇಟಿ ಇದಾಗಿದೆ.

ಇತ್ತೀಚಿನ ಹತ್ಯೆಗಳ ಸರಣಿಯು ಅಮಿತ್ ಶಾ ಮೂರು ದಿನಗಳ ಕಾಲ ತಂಗಲಿರುವ ಗುಪ್ಕರ್ ರಸ್ತೆಯ ರಾಜಭವನದ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಭದ್ರತೆಯನ್ನು ಅಧಿಕಾರಿಗಳು ಬಲಪಡಿಸಿದ್ದಾರೆ.

ಭಯೋತ್ಪಾದಕರ ದಾಳಿಗೆ ಈ ತಿಂಗಳು ವಲಸೆ ಕಾರ್ಮಿಕರು ಸೇರಿದಂತೆ 11 ನಾಗರಿಕರು ಸಾವನ್ನಪ್ಪಿದ್ದಾರೆ.

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಅಮಿತ್ ಶಾ ಅವರು ತಮ್ಮ ಭೇಟಿಯ ಮೊದಲ ದಿನ ಶ್ರೀನಗರ ಮತ್ತು ಶಾರ್ಜಾ ನಡುವೆ ನೇರ ವಿಮಾನವನ್ನು ಉದ್ಘಾಟಿಸಲಿದ್ದಾರೆ. "ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವರು ಕಳೆದ ತಿಂಗಳು ಘೋಷಣೆ ಮಾಡಿದ್ದಾರೆ ಮತ್ತು ಇದು ಶ್ರೀನಗರ ಮತ್ತು ಶಾರ್ಜಾ ನಡುವೆ ನೇರ ವಿಮಾನವಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದರು.

ಸಚಿವರ ಆಗಮನದ ಮುನ್ನಾದಿನವಾದ ಶುಕ್ರವಾರ ಸಿಆರ್‌ಪಿಎಫ್‌ನ ಸ್ಕ್ಯಾನ್ ಮಾಡುವ ಡ್ರೋನ್‌ಗಳು ಹಾಗೂ  ಮೋಟರ್‌ಬೋಟ್‌ಗಳ ನಿಯೋಜನೆಯೊಂದಿಗೆ ಕಣಿವೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಸಿಆರ್‌ಪಿಎಫ್‌ನ ಮೋಟರ್‌ಬೋಟ್‌ಗಳು ನಗರದ ಒಳಭಾಗದಲ್ಲಿ ಹರಿಯುವ ದಾಲ್ ಸರೋವರ ಮತ್ತು ಜೆಹ್ಲಂ ನದಿಯಲ್ಲಿ ತಪಾಸಣೆ ನಡೆಸಲಿವೆ.  ಜನರ ಯಾವುದೇ ಅನುಮಾನಾಸ್ಪದ ಚಲನವಲನದ  ಮೇಲೆ ನಿಗಾ ಇಡಲು ಡ್ರೋನ್‌ಗಳು ಶ್ರೀನಗರ ದಾದ್ಯಂತ ಹಾರಾಟ ನಡೆಸಿದವು.

ಆಯಕಟ್ಟಿನ ಸ್ಥಳಗಳಲ್ಲಿ ಸ್ನೈಪರ್‌ಗಳು ಹಾಗೂ  ಶಾರ್ಪ್‌ಶೂಟರ್‌ಗಳನ್ನು ನಿಯೋಜಿಸಲಾಗಿದೆ. ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ”ಎಂದು ಅಧಿಕಾರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News