ಮುಝಫ್ಫರ್ ನಗರ ಕೋಮುಗಲಭೆ ಪ್ರಕರಣ: ಬಿಜೆಪಿ ಶಾಸಕ ಸೇರಿ 11 ಮಂದಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Update: 2021-10-23 06:32 GMT
ಸಾಂದರ್ಭಿಕ ಚಿತ್ರ

2013ರ ಮುಝಫರ್‌ನಗರ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಮಂದಿಯನ್ನು ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ ಎಂದು indianexpress.com ವರದಿ ಮಾಡಿದೆ.

ಆಗಸ್ಟ್ 2013 ರಂದು ಕವಾಲ್ ಗ್ರಾಮದಲ್ಲಿ ಸೋದರ ಸಂಬಂಧಿಗಳಾದ ಸಚಿನ್ ಮತ್ತು ಗೌರವ್ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸೈನಿ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆ ನಡೆದಾಗ ಖತೌಲಿಯ ಶಾಸಕ ಸೈನಿ ಗ್ರಾಮದ ಪ್ರಧಾನರಾಗಿದ್ದರು.

"ವಿಶೇಷ ನ್ಯಾಯಾಧೀಶ ಗೋಪಾಲ್ ಉಪಾಧ್ಯಾಯ ಅವರು ವಿಕ್ರಮ್ ಸೈನಿ ಮತ್ತು ಇತರ 11 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದ್ದಾರೆ" ಎಂದು ಮುಝಫ್ಫರ್‌ ನಗೆ ನ್ಯಾಯಾಲಯದ ತೀರ್ಪಿನ ನಂತರ ಸರ್ಕಾರಿ ವಕೀಲ ನರೇಂದ್ರ ಶರ್ಮಾ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಾಕ್ಷಿಗಳು ಪ್ರಾಸಿಕ್ಯೂಷನ್‌ ಅನ್ನು ಬೆಂಬಲಿಸಲಿಲ್ಲ ಎಂದು ಅವರು ಹೇಳಿದರು.

ಜಾಮೀನಿನ ಮೇಲೆ ಹೊರಗಿದ್ದ ಸೈನಿ ಮತ್ತು ಇತರ ಆರೋಪಿಗಳು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News