ಕಾಶ್ಮೀರದಲ್ಲಿ ಭಾರೀ ಮಳೆ,ಹಿಮಪಾತ:ಮುಂದಿನ ಎರಡು ದಿನ ಹೈಅಲರ್ಟ್

Update: 2021-10-23 07:12 GMT

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಈ ಋತುವಿನ ಮೊದಲ ಹಿಮಪಾತ ಆರಂಭವಾಗಿದೆ. ಮೊಘಲ್ ರಸ್ತೆ ಸೇರಿ ವಿವಿಧೆಡೆ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೂರು ದಿನಗಳ ಭೇಟಿಗೆ ಕೇಂದ್ರಾಡಳಿತ ಪ್ರದೇಶವು ಸ್ವಾಗತಿಸಲು ಸಜ್ಜಾಗಿರುವಂತೆಯೇ ಹವಾಮಾನ ಇಲಾಖೆ ಶನಿವಾರ ಹಾಗೂ ರವಿವಾರ ಹೈಅಲರ್ಟ್ ನೀಡಿದೆ.

ಮಧ್ಯ ಮತ್ತು ದಕ್ಷಿಣ ಕಾಶ್ಮೀರದ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ. ಶ್ರೀನಗರ ಸಿಟಿ ಹಾಗೂ  ಕಣಿವೆಯ ಇತರ ಬಯಲು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗಿದೆ.

ಏತನ್ಮಧ್ಯೆ, ಕಣಿವೆಯ ಮೇಲ್ಭಾಗದ ಕೆಲವು ಸ್ಥಳಗಳಲ್ಲಿ ಒಂದು ಅಡಿಗಿಂತ ಹೆಚ್ಚು ಹಿಮಪಾತ ಕಂಡುಬಂದಿದೆ. ಕಣಿವೆಯ ಗುಲ್ಮಾರ್ಗ್, ಸೋನಾಮಾರ್ಗ್, ಪಹಲ್ಗಾಮ್, ಶೋಪಿಯಾನ್ ಹಾಗೂ  ಗುರೆಜ್ ಪ್ರದೇಶಗಳಲ್ಲಿ ಸಾಧಾರಣ ಹಿಮಪಾತವು ಕಂಡುಬಂದಿದೆ.  ಆದರೆ ಶೋಪಿಯಾನ್ ಪಟ್ಟಣದಲ್ಲಿ ಲಘು ಹಿಮಪಾತವು ಕಂಡುಬಂದಿತು ಮತ್ತು ಪಹಲ್ಗಾಮ್  ಋತುವಿನ ಮೊದಲ ಹಿಮವನ್ನು ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News