ಮೂರು ವರ್ಷಗಳ ನಂತರ ಸಕ್ರಿಯ ರಾಜಕೀಯಕ್ಕೆ ಮರಳಿದ ವಸುಂಧರಾ ರಾಜೆ

Update: 2021-10-23 07:31 GMT

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ 2018 ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಮೊದಲ ಬಾರಿಗೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.

 ಕಳೆದ ಮೂರು ವರ್ಷಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗದೇ ಇರುವ ಬಗ್ಗೆ ಪ್ರಶ್ನಿಸಿದಾಗ, ರಾಜೆ ತನ್ನ ಸೊಸೆಯ ಅನಾರೋಗ್ಯದ ಕಾರಣದಿಂದ ದೂರ ಉಳಿದಿದ್ದೆ ಎಂದು ಹೇಳಿದರು.

ಎರಡು ದಿನಗಳ ಜೋಧ್‌ಪುರ ಪ್ರವಾಸದಲ್ಲಿ ರಾಜೆ  ಅವರು ಸರ್ಕ್ಯೂಟ್ ಹೌಸ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದರು. ಅಲ್ಲಿ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು.

 ಮುಂಬರುವ ಉಪಚುನಾವಣೆಗೆ ಸಜ್ಜಾಗುವಂತೆ ಬಿಜೆಪಿ ಕಾರ್ಯಕರ್ತರನ್ನು  ವಸುಂಧರಾ ಕೋರಿದ್ದಾರೆ. ಆಡಳಿತಾರೂಢ  ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ  ಇದು ಆ ಪಕ್ಷದ  ಆಂತರಿಕ ವಿಷಯ ಎಂದು ಹೇಳಿದರು.

ರಾಜಕೀಯ ಪ್ರವಾಸದೊಂದಿಗೆ ರಾಜೆ ಅವರು 2023 ರ ಅಸೆಂಬ್ಲಿ ಚುನಾವಣೆಗೆ ತಯಾರಿ ಆರಂಭಿಸಿದರು  ಎಂಬುದು ಸ್ಪಷ್ಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News