ನಟ ವಿವೇಕ್‌ ಸಾವಿಗೆ ಕೊರೋನ ಲಸಿಕೆ ಕಾರಣವಾಗಿತ್ತೇ?: ಸರಕಾರದ ವರದಿ ಹೇಳಿದ್ದು ಹೀಗೆ...

Update: 2021-10-23 09:20 GMT
photo: twitter

ಚೆನ್ನೈ: ಜನಪ್ರಿಯ ಕಾಲಿವುಡ್ ನಟ ವಿವೇಕ್ ಹೃದಯಾಘಾತದಿಂದ ನಿಧನರಾಗಿದ್ದು ಕೋವಿಡ್ ವ್ಯಾಕ್ಸಿನೇಷನ್ ನಿಂದಾಗಿ ಅವರು ಸಾವನ್ನಪ್ಪಿಲ್ಲ ಎಂದು ಸರಕಾರದ ವರದಿಯಿಂದ ತಿಳಿದುಬಂದಿದೆ.  

ವಿವೇಕ್ ಅವರು ಸಾಯುವ ಎರಡು ದಿನಗಳ ಮೊದಲು ಅವರು ಕೋವಿಡ್ -19 ಲಸಿಕೆಯನ್ನು ತೆಗೆದುಕೊಂಡಿದ್ದರು.

ಖ್ಯಾತ ಹಾಸ್ಯ ನಟ ಹೃದಯಾಘಾತವಾದ ನಂತರ ಎಪ್ರಿಲ್ 16 ರಂದು ಚೆನ್ನೈ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು. ಎಪ್ರಿಲ್ 17 ರಂದು ಮುಂಜಾನೆ ನಿಧನರಾಗಿದ್ದರು.

59 ವರ್ಷದ ನಟ ಎಪ್ರಿಲ್ 15 ರಂದು ಕೋವಿಡ್ -19 ಲಸಿಕೆಯನ್ನು ತೆಗೆದುಕೊಂಡಿದ್ದರು.

ವಿವೇಕ್  ಸಾವಿಗೂ  ಕೊರೋನ ಲಸಿಕೆಗೂ  ಸಂಬಂಧ ವಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ ಹೊರತಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿಗೆ  ಲಸಿಕೆ ಕಾರಣ ಎಂಬ  ಊಹಾಪೋಹಗಳನ್ನು ಹರಡಲಾಗಿತ್ತು. ಇದು  ಜನರು ಲಸಿಕೆ ಪಡೆಯಲು ಹಿಂಜರಿಕೆಗೆ ಸ್ವಲ್ಪ ಮಟ್ಟಿಗೆ ಕೊಡುಗೆ ನೀಡಿತು.

ಇದೀಗ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಇಮ್ಯೂನೈಸೇಶನ್ ವಿಭಾಗ, ಇಮ್ಯೂನೈಸೇಶನ್ ನಂತರದ ಗಂಭೀರ ಪ್ರತಿಕೂಲ ಘಟನೆಗಳ ವರದಿಯಲ್ಲಿ ನಟನ ಸಾವಿಗೆ ಲಸಿಕೆ ಕಾರಣ ಎಂಬುದನ್ನು ತಳ್ಳಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News