ಕಾನೂನು ಸಚಿವರ ಸಮ್ಮುಖದಲ್ಲೇ ನ್ಯಾಯಾಂಗ ಮೂಲಸೌಕರ್ಯ ಕುರಿತು ಕಳವಳ ವ್ಯಕ್ತಪಡಿಸಿದ ಸಿಜೆಐ ರಮಣ

Update: 2021-10-23 08:54 GMT

 ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಇಂದು ಕಾನೂನು ಸಚಿವ ಕಿರಣ್ ರಿಜಿಜು ಅವರೊಂದಿಗೆ ವೇದಿಕೆ ಹಂಚಿಕೊಂಡಾಗ ನ್ಯಾಯಾಂಗ ಮೂಲಸೌಕರ್ಯ ಕುರಿತು ಹಲವಾರು ಕಳವಳಗಳನ್ನು ವ್ಯಕ್ತಪಡಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಕೈಗೆತ್ತಿಕೊಳ್ಳುವಂತೆ ಅವರು ಕಾನೂನು ಸಚಿವರನ್ನು ಒತ್ತಾಯಿಸಿದರು.

"ಭಾರತದ ನ್ಯಾಯಾಲಯಗಳಿಗೆ ಮೂಲಸೌಕರ್ಯ ಒದಗಿಸಬೇಕೆಂಬ ಕಲ್ಪನೆಯೇ ಇಲ್ಲ.  ಈ ಮನಸ್ಥಿತಿಯ ಕಾರಣದಿಂದಾಗಿ ಭಾರತದಲ್ಲಿ ನ್ಯಾಯಾಲಯಗಳು ಇನ್ನೂ ಶಿಥಿಲವಾದ ಕಟ್ಡಡಗಳೊಂದಿಗೆ ಕಾರ್ಯನಿರ್ವಹಿಸುತ್ತವೆ,. ಇದು  ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ" ಎಂದು ಮುಖ್ಯ ನ್ಯಾಯಾಧೀಶರು ಇಂದು ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಕೇವಲ 5 ಪ್ರತಿಶತದಷ್ಟು ನ್ಯಾಯಾಲಯ ಸಂಕೀರ್ಣಗಳು ಮೂಲಭೂತ ವೈದ್ಯಕೀಯ ನೆರವನ್ನು ಹೊಂದಿವೆ ಹಾಗೂ  ಶೇಕಡಾ 26 ರಷ್ಟು ನ್ಯಾಯಾಲಯಗಳು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿಲ್ಲ ಹಾಗೂ  16 ಶೇಕಡಾ ನ್ಯಾಯಾಲಯಗಳು ಪುರುಷರಿಗಾಗಿ ಶೌಚಾಲಯಗಳನ್ನು ಕೂಡ  ಹೊಂದಿಲ್ಲ. ಸುಮಾರು 50 ಪ್ರತಿಶತದಷ್ಟು ನ್ಯಾಯಾಲಯ ಸಂಕೀರ್ಣಗಳು ಗ್ರಂಥಾಲಯವನ್ನು ಹೊಂದಿಲ್ಲ ಮತ್ತು 46 ಶೇಕಡಾ ನ್ಯಾಯಾಲಯ ಸಂಕೀರ್ಣಗಳು ನೀರನ್ನು ಶುದ್ಧೀಕರಿಸುವ ಸೌಲಭ್ಯವನ್ನು ಹೊಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News