ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ವತಿಯಿಂದ ಉಚಿತ ಸ್ಕಾಲರ್ಶಿಪ್ ಅಭಿಯಾನ

Update: 2021-10-23 10:30 GMT

ಮಂಗಳೂರು : ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ವತಿಯಿಂದ ಉಚಿತ ಸ್ಕಾಲರ್ಶಿಪ್ ಅಭಿಯಾನವು ಕಾವೂರು ಜಂಕ್ಷನ್ ಹಾಗೂ ಮುಲ್ಕಿಯಲ್ಲಿ ನಡೆಯಿತು. 

1ನೇ ತರಗತಿಯಿಂದ ವೃತ್ತಿಪರ  ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2021-22'ನೇ ಸಾಲಿನ ಪ್ರೀ ಮೆಟ್ರಿಕ್ , ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಮ್ ಮೀನ್ಸ್  ವಿದ್ಯಾರ್ಥಿ ವೇತನದ ಅರ್ಜಿಯನ್ನು ಉಚಿತವಾಗಿ ಸಲ್ಲಿಸಲಾಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಅಶ್ರಫ್ ಪೊರ್ಕೋಡಿ, ಕಾವೂರು ಏರಿಯಾ ನಾಯಕರು, ಮುಲ್ಕಿ ಏರಿಯಾ ನಾಯಕರು ಹಾಗೂ ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News