ಜಮ್ಮುಕಾಶ್ಮೀರದಲ್ಲಿ ಸಹಜತೆ ನೆಲೆಸಿರುವಂತೆ ವರ್ತಿಸುವುದು ಆತ್ಮಹತ್ಯೆಯಂತೆ : ಕಾಶ್ಮೀರಿ ಪಂಡಿತರ ಸಂಘಟನೆ

Update: 2021-10-23 18:16 GMT

ಮುಂಬೈ, ಅ. 23: ಕಣಿವೆಯಲ್ಲಿ ಸಹಜತೆ ನೆಲೆಸಿರುವಂತೆ ವರ್ತಿಸುವುದು ಹಾಗೂ ಪರಿಸ್ಥಿತಿಯ ತೀವ್ರತೆಯನ್ನು ಕ್ಷುಲ್ಲಕಗೊಳಿಸುವುದು ಆತ್ಮಹತ್ಯೆಯ ದಾರಿ ಹಿಡಿದಂತೆ ಎಂದು ವಲಸೆ ಕಾಶ್ಮೀರಿ ಪಂಡಿತರ ಸಂಘಟನೆ ‘ಪನುನ್ ಕಾಶ್ಮೀರ್’ ಪ್ರತಿಪಾದಿಸಿದೆ.

ಎಲ್ಲ ವಲಸೆ ಹಿಂದೂಗಳ ಶಾಶ್ವತ ಪುನರ್ವಸತಿಗೆ ಝೀಲಂ ನದಿಯನ್ನು ಉತ್ತರ ಹಾಗೂ ಪೂರ್ವ ತಾಯ್ನೆಡಾಗಿ ರೂಪಿಸಬೇಕು ಹಾಗೂ ವಲಯದ ಶಾಂತಿಗೆ ಜಮ್ಮುವನ್ನು ಪ್ರತ್ಯೇಕಿಸಬೇಕು ಎಂಬ ಬೇಡಿಕೆಯನ್ನು ಅವರು ಮರು ಉಚ್ಚರಿಸಿದ್ದಾರೆ. ಕಣಿವೆಯಲ್ಲಿ ಈ ತಿಂಗಳು ನಡೆದ ಭಯೋತ್ಪಾದಕರ ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಅಧ್ಯಾಪಕರು, ಫಾರ್ಮಸಿ ಮಾಲಿಕರು ಹಾಗೂ ಇತರ ಐವರು ಸ್ಥಳೀಯ ಕಾರ್ಮಿಕರು ಸೇರಿದಂತೆ 11 ಮಂದಿಯನ್ನು ಹತ್ಯೆಗೈದಿದ್ದರು.

‘‘ಜಮ್ಮು ಹಾಗೂ ಕಾಶ್ಮೀರದ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಂಡಿದೆ. ಜಮ್ಮು ಹಾಗೂ ಕಾಶ್ಮೀರದ್ದು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಅಲ್ಲ. ಇದು ಕೇವಲ ಭಯೋತ್ಪಾದನೆಯ ಸಮಸ್ಯೆ ಅಲ್ಲ. ಇದು ಜಿಹಾದ್ನ ಸ್ಪಷ್ಟ ಅಭಿವ್ಯಕ್ತಿ’’ ಎಂದು ‘ಪನುನ್ ಕಾಶ್ಮೀರ’ದ ಅಧ್ಯಕ್ಷ ಅಜಯ್ ಚ್ರುಂಗೂ ಜಮ್ಮುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News