ಕಾಸರಗೋಡು ಚಿನ್ನಾರ ಭಾಷಾಂತರಿಸಿದ ನಾಟಕ ಪುಸ್ತಕಗಳ ಬಿಡುಗಡೆ

Update: 2021-10-24 13:33 GMT

ಉಡುಪಿ, ಅ.24: ಉಡುಪಿ ಅನಂತ ವೈದಿಕ ಕೇಂದ್ರ, ರಂಗನಾಥ ಶೆಣೈ ಕಂಪೌಂಡು ನಿವಾಸಿಗಳ ಸಹಯೋಗದಲ್ಲಿ ಚಲನಚಿತ್ರ ನಿರ್ದೇಶಕ, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರ ಭಾಷಾಂತರಿಸಿದ ಎರಡು ನಾಟಕ ಪುಸ್ತಕಗಳನ್ನು ಬಿಡುಗಡೆ ಸಮಾರಂಭವು ಪಿಪಿಸಿ ರಂಗನಾಥ ಶೆಣೈ ಕಂಪೌಂಡ್‌ನಲ್ಲಿ ರವಿವಾರ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಅವಿಭಜಿತ ದ.ಕ. ಹಾಗೂ ಕಾರಸಗೋಡು ಸಾಹಿತ್ಯ ಹಾಗೂ ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ ಜಿಲ್ಲೆಗಳು. ಕೊಂಕಣಿ ಭಾಷಿಕರು ಬೇರೆ ಬೇರೆ ಜಾತಿ, ಧರ್ಮಗಳಲ್ಲಿ ಇದ್ದಾರೆ. ಅವರೆಲ್ಲರ ಮಧ್ಯೆ ಭಾಂದ್ಯವ ಬೆಳೆಸುವಲ್ಲಿ ಕಾಸರಗೊಡು ಚಿನ್ನಾರ ಶ್ರಮ ಬಹಳ ಮಹತ್ವದ್ದು. ಇದು ಇಂದಿನ ಅವಶ್ಯಕವಾಗಿದೆ. ಅಲ್ಲದೆ ಇವರು ಕೊಂಕಣಿ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಕವಿ ಮನೋಹರ್ ನಾಯಕ್ ‘ನಾಯಿ ಮತ್ತು ನಾಯಿ ಬಾಲ’ ಹಾಗೂ ‘ತ್ರಿಭಾಷಾ ರಂಗ ನಾಟಕಗಳು’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಹಾಸ್ಯ ಲೇಖಕಿ ಸಂಧ್ಯಾ ಶೆಣೈ, ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಕಾಸರಗೋಡು ಚಿನ್ನಾ ಮಾತನಾಡಿದರು.

ಆರ್‌ಎಸ್‌ಬಿ ಸಮುದಾಯದ ಗೋಕುಲ್ ದಾಸ್ ನಾಯಕ್, ಕುಡಾಳ ದೇಶಸ್ಥ ಸಮಾಜದ ಮಹೇಶ್ ಠಾಕೂರು, ಖಾರ್ವಿ ಸಮುದಾಯದ ನಾರಾಯಣ ಖಾರ್ವಿ, ದೇಶ ಭಂಡಾರಿ ಸಮಾಜದ ಚಿದಾ ನಂದ ಭಂಡಾರಿ ಕಾಗಾಲ, ರಂಗಕರ್ಮಿ ರಾಜಗೋಪಾಲ ಶೇಟ್, ವೈಶ್ಯವಾಣಿ ಸಮಾಜದ ವಸಂತ ನಾಯಕ್, ಕೆಥೋಲಿಕ್ ಸಮಾಜದ ಕಲಾವಿದೆ ವಿವಿಟಾ ಡಿಸೋಜ, ನ್ಯಾಯ ವಾದಿ ಲಕ್ಷ್ಮಣ್ ಶೆಣೈ,ಕ ಮೀನಾ ಕುಾರಿ, ಹರಿಪ್ರತಾಪ್ ಉಪಸ್ಥಿತರಿದ್ದರು.

ಅನಂತ ವೈದಿಕ ಕೇಂದ್ರದ ನಿರ್ದೇಶಕ ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿದರು. ಸ್ನೇಹಾ ವಿನೋದ್ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News