‘ಮನುಜ ಕಣಜ’ ಪುಸ್ತಕ ಲೋಕಾರ್ಪಣೆ

Update: 2021-10-24 15:30 GMT

ಮಂಗಳೂರು, ಅ.24: ಹಿರಿಯ ಲೇಖಕಿ ಮನೋರಮಾ ಭಟ್ ಅವರ ಹೊಸ ಪುಸ್ತಕ ‘ಮನುಜ-ಕಣಜ’ ನೂಯಿ ಶಿವರಾವ್ ಫೌಂಡೇಶನ್‌ನ ಸಭಾಂಗಣದಲ್ಲಿ ಬಿಡುಗಡೆಗೊಂಡಿತು.

ನಿವೃತ್ತ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮನೋರಮಾ ಭಟ್ ಮುಂದಿನ ಜನಾಂಗಕ್ಕೆ ಮಾದರಿ. ಇವರ ಲೇಖನ, ಸಾಹಿತ್ಯವನ್ನು ಓದಿದರೆ ಹೊಸ ಜೀವನಾನುಭವ ಸಿಗುತ್ತದೆ. ಅದು ಮುಂದಿನ ಪೀಳಿಗೆಗೆ ಪ್ರೇರಣೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಡಾ.ನಾ.ದಾಮೋದರ ಶೆಟ್ಟಿ, ಮನೋರಮಾ ಭಟ್ ಈ ಇಳಿ ವಯಸ್ಸಿನಲ್ಲೂ ಜೀವನ ಪ್ರೀತಿ ಹೆಚ್ಚಿಸಿಕೊಂಡು, ಲವಲವಿಕೆಯಿಂದ ಇರುವುದಕ್ಕೆ ಕಾರಣ ಅವರ ಮಗುವಿನಂತ ಮನಸ್ಸು. ಅವರ ಬರವಣಿಗೆಯಲ್ಲೂ ಜೀವನೋತ್ಸಾಹ ಕಾಣಸಿಗುತ್ತದೆ. ಅವರ ಇನ್ನಷ್ಟು ಲೇಖನಗಳು ಪುಸ್ತಕ ರೂಪದಲ್ಲಿ ಬರಲಿ ಎಂದು ಹಾರೈಸಿದರು.

ಕೃತಿ ವಿಮರ್ಶೆ ಮಾಡಿದ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡುತ್ತಾ, 90 ಇಳಿವಯಸ್ಸಿನಲ್ಲಿ ಪುಸ್ತಕ ಬರೆಯುವ ಅವರ ಹುಮ್ಮಸ್ಸು ಎಂತವರನ್ನೂ ನಾಚಿಸುತ್ತದೆ ಎಂದರು.

ನೂಯಿ ಫೌಂಡೇಶನ್ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಸ್ವರ ಪಬ್ಲಿಕೇಶನ್ ಪ್ರಕಾಶನದ ಈ ಪುಸ್ತಕದಲ್ಲಿ ವಿವಿಧ ಸಾಧಕರ ಬಗೆಗಿನ ಲೇಖನಗಳಿವೆ. ನೂಯಿ ಫೌಂಡೇಶನ್‌ನ ನೂಯಿ ಶಶಿರಾಜ್ ರಾವ್ ಸ್ವಾಗತಿಸಿದರು. ನ್ಯಾಯವಾದಿ ಶಶಿರಾಜ್ ಕಾವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News