ದೇರಳಕಟ್ಟೆ: ವಿಶೇಷ ಚೇತನ ಮಕ್ಕಳಿಗೆ ಸಲಕರಣೆ ವಿತರಣೆ

Update: 2021-10-24 15:33 GMT

ಕೊಣಾಜೆ: ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್ , ಟೀಂ ಲಕ್ಷ್ಯ ಇದರ ಸಹಯೋಗದೊಂದಿಗೆ ನಿಟ್ಟೆ (ಡಿಯು) ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,  ದಕ್ಷಿಣ ಹಾಗೂ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಡುವೆ ಒಪ್ಪಂದ ಹಾಗೂ ಟೀಂ ಲಕ್ಷ್ಯ ವತಿಯಿಂದ ಏಡ್ಸ್ ಕಿಟ್ ಹಾಗೂ ವಿಶೇಷ ಚೇತನ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವು ಶನಿವಾರ ದೇರಳಕಟ್ಟೆ ಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಅವರು, ವಿಶೇಷ ಚೇತನ ಮಕ್ಕಳನ್ನು ಪತ್ತೆಹಚ್ಚಿ ಆಸ್ಪತ್ರೆಗೆ ಕರೆತಂದು ಅವರಿಗೆ ಶುಶ್ರೂಷೆ ನೀಡುವ ಕಾರ್ಯಕ್ರಮ ಮುಂದಿನ ಐದು ವರ್ಷಕ್ಕೆ ಒಪ್ಪಂದ ಮಾಡಲಾಗಿದೆ. ನೀಡಿದ ಸಲಕರಣೆಗಳ ಉಪಯೋಗ ಮಾಡಿಕೊಂಡು ದಿವ್ಯಾಂಗಿಗಳ ಭವಿಷ್ಯವನ್ನು ರೂಪಿಸುವ ಕಾರ್ಯವಾಗಬೇಕು. ಇಂತಹ ಕಾರ್ಯಕ್ರಮಗಳು ನಿಜವಾದ ಪ್ರಯೋಜನ ಮಕ್ಕಳು ಹಾಗೂ ಸಮಾಜಕ್ಕೆ ಸಿಗಲಿ ಎಂದು  ಅಭಿಪ್ರಾಯಪಟ್ಟರು‌.

ನಿಟ್ಟೆ ವಿ.ವಿ ಸ್ಪೆಷಲ್ ಚೈಲ್ಡ್ ಪ್ರೋಗ್ರ್ಯಾಮ್  ನ ತಂಡ ಸಕ್ರಿಯವಾಗಿ ಕಾರ್ಯಾಚರಿಸಿ ಜಿಲ್ಲೆಯ  ಹಲವು ವಿಶೇಷ ಚೇತನ ಮಕ್ಕಳಿಗೆ ದಾರಿದೀಪವಾಗಿದೆ ಎಂದರು. ಈ ಸಂದರ್ಭ  ದಕ್ಷಿಣ ವಲಯ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ ಕೆ ಅವರು ಮಾತನಾಡಿ, ವಿಶೇಷ ಮಕ್ಕಳನ್ನು ಮುಖ್ಯವಾಹಿಣಿಗೆ ತರುವುದೇ ನಮ್ಮ ಉದ್ದೇಶವಾಗಿದೆ. ನಿಟ್ಟೆ ವಿವಿಯ ಸಹಕಾರದೊಂದಿಗೆ ವಿಶೇಷ ಮಕ್ಕಳಿಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತಿವೆ. ಮುಂದಿನ ದಿನಗಳಲ್ಲಿಯೂ ಇಂತಹ ಸಹಕಾರ ಮುಂದುವರಿಯಲಿ ಎಂದು ಆಶಿಸಿದರು.

ಉತ್ತರ ವಲಯ ಶಿಕ್ಷಣಾಧಿಕಾರಿ ಸದಾನಂದ ಪೂಂಜ, ನಿಟ್ಟೆ  N- SPECC ಅಧ್ಯಕ್ಷೆ ಡಾ. ಅಮಿತಾ.ಎಂ ಹೆಗ್ಡೆ, ಕಾರ್ಯದರ್ಶಿ ಡಾ. ಅಮರಶ್ರೀ, ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ರಾಹುಲ್ ಭಂಡಾರಿ ಉಪಸ್ಥಿತರಿದ್ದರು. ಎ.ಬಿ ಶೆಟ್ಟಿ ದಂತ ವಿದ್ಯಾಲಯದ ಡೀನ್ ಡಾ.ಯು.ಎಸ್ ಕೃಷ್ಣ ನಾಯಕ್ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News