ನೇರಳಕಟ್ಟೆ : ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ

Update: 2021-10-24 16:54 GMT

ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ "ನಿರೀಕ್ಷೆಗಳ ನೀಲ ನಕ್ಷೆ " ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿಭೋತ್ಸವ ಕಾರ್ಯಕ್ರಮವು ನೇರಳಕಟ್ಟೆ ತಾಜುಲ್ ಫುಖಹಾ‌ಅ್ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಸಾಬಿತ್ ಮುಈನೀ ಸಖಾಫಿ ಪಾಟ್ರಕೋಡಿ ವಹಿಸಿದ್ದರು. ಹುಸೈನ್ ಮದನಿ ನೇರಳಕಟ್ಟೆ  ಉದ್ಘಾಟಿಸಿದರು, ಸಯ್ಯಿದ್ ಹಂಝ ಅಲ್ ಹಾದಿ ತಂಙಳ್  ಪಾಟ್ರಕೋಡಿ ದುಆ ನೆರವೇರಿಸಿದರು, ಅಹ್ಮದ್ ಮದನಿ ಉಸ್ತಾದ್ ನೇರಳಕಟ್ಟೆ ಧ್ವಜಾರೋಹಣಗೈದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ವೈ.ಎಸ್. ಕರ್ನಾಟಕ ಸಾಂತ್ವನ ವಿಭಾಗದ ಚೆಯರ್ಮೇನ್ ಜಿ.ಎಂ. ಕಾಮಿಲ್ ಸಖಾಫಿ  ವಹಿಸಿದ್ದರು. ನಚ್ಚಬೆಟ್ಟು ದಾರುಲ್ ಮುಸ್ತಫಾ ಚೆಯರ್ಮೇನ್ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಭಾಷಣಗೈದರು. ಎಸ್.ವೈ.ಎಸ್. ಮಾಣಿ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಅದಿ ಪಾಟ್ರಕೋಡಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಜನ್ ಅಧ್ಯಕ್ಷ ಹಾಫಿಲ್ ತೌಸೀಫ್ ಅಸ್ ಅದಿ ಕೆಮ್ಮನ್, ಅಹ್ಮದ್ ಜುನೈದ್ ಸಅದಿ ವಳವೂರು, ಹಾಗೂ ಮುನವ್ವರ್ ಜೋಗಿಬೆಟ್ಟು ಮಾತನಾಡಿದರು.

ವಿವಿಧ ಸಂಘಟನೆಗಳ ಪ್ರಮುಖರುಗಳಾದ ಇಬ್ರಾಹಿಂ ಸಅದಿ ಮಾಣಿ, ಹಂಝ ಮದನಿ ಮಿತ್ತೂರು, ರಝಾಕ್ ಮದನಿ ಕಾಮಿಲ್ ಸಖಾಫಿ ಕುದುಂಬ್ಲಾಡಿ, ಶರೀಫ್ ಸಖಾಫಿ ಮಾಣಿ, ಹುಸೈನ್ ಮದನಿ ನೇರಳಕಟ್ಟೆ, ಇಸ್ಮಾಯಿಲ್ ಮದನಿ ನೇರಳಕಟ್ಟೆ, ಅಬ್ದುಲ್ ಖಾದರ್ ಮದನಿ ನೇರಳಕಟ್ಟೆ, ಮುಹಮ್ಮದ್ ನಾಸಿರ್ ಸಅದಿ ನೇರಳಕಟ್ಟೆ, ಕೆ.ಬಿ.ಖಾಸಿಂ ಹಾಜಿ ಮಿತ್ತೂರು, ಎನ್.ಕೆ.ಖಾಸಿಂ ನೇರಳಕಟ್ಟೆ, ಅಬ್ಬಾಸ್ ನೇರಳಕಟ್ಟೆ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ರಶೀದ್ ಸಖಾಫಿ ಗಡಿಯಾರ್, ಹನೀಫ್ ಸಖಾಫಿ ಪೇರಮುಗೇರ್, ಮುಸ್ತಫಾ ಸಅದಿ ಸೂರಿಕುಮೇರ್, ಯೂಸುಫ್ ಹಾಜಿ ಸೂರಿಕುಮೇರ್, ಹಾರಿಸ್ ಅಡ್ಕ, ಯೂಸುಫ್ ಸಹೀದ್ ನೇರಳಕಟ್ಟೆ, ಇಬ್ರಾಹಿಂ ಹಾಜಿ ಸೇರ, ಯಾಕೂಬ್ ನಚ್ಚಬೆಟ್ಟು, ಅಬ್ದುಲ್ ಖಾದರ್ ಫೈಝಿ ಪಾಟ್ರಕೋಡಿ, ಅಬ್ದುಲ್ ಅಝೀಝ್ ಸಖಾಫಿ ಸೂರ್ಯ, ಹೈದರ್ ಸಖಾಫಿ ಬುಡೋಳಿ, ಅಬ್ದುಲ್ ಜಬ್ಬಾರ್ ಸಅದಿ ಪೆರ್ನೆ, ಎಂ.ಎಚ್.ಅಬೂಬಕ್ಕರ್, ಸಖಾಫಿ ಕೆಮ್ಮನ್, ಅಲಿ ಮದನಿ ಗಡಿಯಾರ್, ರಫೀಕ್ ಮದನಿ ಶೇರ, ಹನೀಫ್ ಸಖಾಫಿ ಸೂರ್ಯ, ರಫೀಕ್ ಮದನಿ ಪಾಟ್ರಕೋಡಿ, ಇಸ್ಮಾಯಿಲ್ ಹಾಜಿ ಕಲ್ಲಾಜೆ, ಅಬ್ದುಲ್ ಕರೀಂ ನೆಲ್ಲಿ, ಕೆ.ಎಸ್. ಮುಹಮ್ಮದ್ ಕೆಮ್ಮನ್, ಅಬ್ದುಲ್ ಲತೀಫ್ ಸಅದಿ ಶೇರ, ದಾವೂದ್ ಕಲ್ಲಡ್ಕ, ಅನ್ಸಾರ್ ಸತ್ತಿಕಲ್ಲು, ಮುಸ್ತಫಾ ಬುಡೋಳಿ, ಸಲೀಂ ಮಾಣಿ, ಇಂಜಿನಿಯರ್ ಉಮರ್ ಫಾರೂಕ್ ನೇರಳಕಟ್ಟೆ, ಸಾಹುಲ್ ಹಮೀದ್ ಪರ್ಲೊಟ್ಟು, ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಎನ್.ಕೆ. ಅಬೂಬಕ್ಕರ್ ನೇರಳಕಟ್ಟೆ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಮಾಣಿ ಸೆಕ್ಟರ್ ವ್ಯಾಪ್ತಿಯ ಮದ್ರಸಗಳ ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಸ್ಪರ್ಧೆ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಉಮ್ಮರ್ ಮದನಿ ನೇರಳಕಟ್ಟೆ ಸ್ವಾಗತಿಸಿ, ನೌಫಲ್ ಪೇರಮುಗೇರು ವಂದಿಸಿದರು.  ಸ್ವಾದಿಕ್ ಪೇರಮೊಗರು, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News