×
Ad

ಶಾರೂಖ್‌ ಖಾನ್‌ ರ ಕ್ಯಾಡ್‌ಬರಿ ದೀಪಾವಳಿ ಜಾಹೀರಾತಿಗೆ ಭಾರೀ ಪ್ರಶಂಸೆ: ಇದರ ವಿಶೇಷತೆಯೇನು ಗೊತ್ತೇ?

Update: 2021-10-24 23:28 IST

ಹೊಸದಿಲ್ಲಿ: ದೇಶದಾದ್ಯಂತ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಕುರಿತು ಸುದ್ದಿಗದ್ದಲಗಳು ಎದ್ದಿರುವ ನಡುವೆಯೇ ಶಾರೂಖ್‌ ಖಾನ್‌ ಮತ್ತೆ ಸುದ್ದಿಯಾಗಿದ್ದಾರೆ. ಕೋವಿಡ್‌ ನಿಂದ ತತ್ತರಿಸಿರುವ ಹಲವು ಉದ್ಯಮಗಳಿಗೆ ಇದೀಗ ಕ್ಯಾಡ್ಬರಿ ಸಂಸ್ಥೆಯು ನೆರವಾಗಿದ್ದು, ವಿಶೇಷವಾದ ಯೋಜನೆಯೊಂದನ್ನು ದೀಪಾವಳಿಯ ಉಡುಗೊರೆಯಾಗಿ ನೀಡಿದೆ. 

ಕೋವಿಡ್‌ ಮತ್ತು ಲಾಕ್ಡೌನ್‌ ಸಂದರ್ಭದಲ್ಲಿ ಹಲವಾರು ಸಣ್ಣ ಉದ್ಯಮಗಳು ಮುಚ್ಚುಗಡೆಯಾಗಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈಗಲೂ ನಿರಾಶೆಯಲ್ಲೇ ಇದ್ದಾರೆ. ಈ ನಡುವೆ ಕ್ಯಾಡ್ಬರಿ ವಿಶೇಷವಾದ ಕಾರ್ಯ ಮಾಡಿದ್ದು, ಸ್ಥಳಿಯ ಉದ್ಯಮಗಳನ್ನು ಮೇಲೆತ್ತುವ ಸಲುವಾಗಿ ಹಾಗೂ ಪ್ರಚಾರ ನೀಡುವ ಸಲುವಾಗಿ ಶಾರೂಖ್‌ ಖಾನ್‌ ರನ್ನು ಬಳಸಿ ಈ ಜಾಹೀರಾತು ನಿರ್ಮಿಸಲಾಗಿದೆ.

ಈ ಜಾಹೀರಾತಿನ ವಿಶೇಷತೆಯೇನೆಂದರೆ, ಇದರಲ್ಲಿ ನಿಮ್ಮ ಸಣ್ಣ ಅಂಗಡಿಯ, ಹೋಟೆಲ್‌ ಹೆಸರುಗಳನ್ನು ಶಾರೂಖ್‌ ಖಾನ್‌ ಬಾಯಲ್ಲೇ ಹೇಳಿಸಬಹುದಾಗಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ಇದನ್ನು ನಿರ್ಮಿಸಲಾಗಿದೆ. ನಿಮ್ಮ ಉದ್ಯಮದ ಹೆಸರನ್ನು ನಮೂದಿಸಿದ ತಕ್ಷಣ ಶಾರೂಖ್‌ ಖಾನ್‌ ಜಾಹೀರಾತಿನಲ್ಲಿ " ಚಪ್ಪಲಿಗಳನ್ನು ಖರೀದಿಸಬೇಕಾದರೆ ಸ್ಟಾರ್‌ ಫೂಟ್‌ ವೇರ್‌ ಗೆ ಭೇಟಿ ನೀಡಿ" ಎಂದು ಹೇಳುತ್ತಾರೆ. ಸದ್ಯ ಈ ಜಾಹೀರಾತಿನ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಟ್ವಿಟರಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ....

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News