ಕಾನೂನು ಕ್ರಮದಿಂದ ರಕ್ಷಣೆ ಕೋರಿ ಹಿರಿಯ ಎನ್‍ಸಿಬಿ ಅಧಿಕಾರಿಯಿಂದ ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ಪತ್ರ

Update: 2021-10-25 07:13 GMT
ಸಮೀರ್ ವಾಂಖೇಡೆ (File Photo: PTI)

ಮುಂಬೈ: ದುರುದ್ದೇಶದಿಂದ ತಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಬಹುದೆಂಬ ಭಯದಿಂದ ಕಾನೂನು ಕ್ರಮದಿಂದ ರಕ್ಷಣೆಯನ್ನು ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಅವರು ಮುಂಬೈ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ತಮಗೆ ಬಂಧನ ಹಾಗು ಸೇವೆಯಿಂದ ವಜಾಗೊಳಿಸುವ ಬೆದರಿಕೆಗಳನ್ನು 'ಅತ್ಯಂತ ಗೌರವಾನ್ವಿತ ಜನರು' ಒಡ್ಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ವಾಂಖೇಡೆ ಅವರು ಒಂದು ವರ್ಷದಲ್ಲಿ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಎನ್‍ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ನೀಡಿದ ಹೇಳಿಕೆಯ ಹಿನ್ನಲೆಯಲ್ಲಿ ಅವರು ಪತ್ರ ಬರೆದಿದ್ದಾರೆನ್ನಲಾಗಿದೆ.

"ಅವರು (ಬಿಜೆಪಿ) ಒಂದು ಕೈಗೊಂಬೆಯನ್ನು ಹೊಂದಿದ್ದಾರೆ. ಅವರು ಜನರ ವಿರುದ್ಧ ಬೋಗಸ್ ಪ್ರಕರಣಗಳನ್ನು ಎತ್ತುತ್ತಿದ್ದಾರೆ. ಬೋಗಸ್ ಪ್ರಕರಣಗಳ ಸಾಕ್ಷ್ಯ ನಮ್ಮ ಬಳಿ ಇವೆ. ಅವರು ಒಂದು ವರ್ಷದೊಳಗೆ ಕೆಲಸ ಕಳೆದುಕೊಳ್ಳಲಿದ್ದಾರೆ,'' ಎಂದು ಮಲಿಕ್ ಹೇಳಿದರು.

ಈ ಹಿನ್ನೆಲೆಯಲ್ಲಿ ಮುಂಬೈ ಪೊಲಿಸರಿಗೆ ಪತ್ರ ಬರೆದಿರುವ ವಾಂಖೇಡೆ ಅಪರಿಚಿತ ವ್ಯಕ್ತಿಗಳು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದಿದ್ದಾರೆ.

ಆರ್ಯನ್ ಖಾನ್ ಪ್ರಕರಣದ ಸಾಕ್ಷಿ, ಖಾಸಗಿ ತನಿಖಾಕಾರ ಕೆ ಪಿ ಗೋಸಾಯಿ ಅವರ ಖಾಸಗಿ ಬಾಡಿಗಾರ್ಡ್ ತಾನೆಂದು ಹೇಳಿಕೊಳ್ಳುತ್ತಿರುವ ಪ್ರಭಾಕರ್ ಸೈಲ್ ಅವರು ಈ ಪ್ರಕರಣದಲ್ಲಿ ರೂ. 18 ಕೋಟಿ ಡೀಲ್ ಆಗಿದೆ ಎಂದು ರವಿವಾರ ಆರೋಪಿಸಿದ್ದರು.

ಸಮೀರ್ ವಾಂಖೇಡೆಗೆ ರೂ. 8 ಕೋಟಿ ನೀಡಬೇಕಿದೆ ಎಂದು  ಇದೀಗ ತಲೆಮರೆಸಿಕೊಂಡಿರುವ ಗೋಸಾವಿ ಹೇಳಿದ್ದರು ಎಂದು ಸೈಲ್ ತಮ್ಮ ಅಫಿಡವಿಟ್‍ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News