ಕೇಂದ್ರವು ಇಂಧನ ಬೆಲೆಗಳಲ್ಲಿ ಶತಕದ ಸಂಭ್ರಮ ಆಚರಿಸಬೇಕು: ಚಿದಂಬರಂ

Update: 2021-10-25 17:48 GMT

ಹೊಸದಿಲ್ಲಿ,ಅ.25: ಇಂಧನಗಳ ಬೆಲೆ ಏರಿಕೆಗಾಗಿ ಸೋಮವಾರ ಕೇಂದ್ರ ಸರಕಾರವನ್ನು ಟೀಕಿಸಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು,ಶತಕೋಟಿ ಕೋವಿಡ್ ಲಸಿಕೆ ಡೋಸ್‌ಗಳಿಗಾಗಿ ಮಾಡಿದಂತೆ ಇಂಧನ ಬೆಲೆಗಳ ‘ಶತಾಬ್ದಿ’ಗಳನ್ನೂ ಅದು ಆಚರಿಸಬೇಕು ಎಂದು ಹೇಳಿದರು.

‘100 ಕೋ.ಲಸಿಕೆ ಡೋಸ್‌ನ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಸಚಿವರ ನೇತೃತ್ವ ವಹಿಸಿದ್ದರು. ಇತರ ಶತಾಬ್ದಿಗಳ ಆಚರಣೆಗೂ ಅವರು ನೇತೃತ್ವ ವಹಿಸಬೇಕು. ಕೆಲವು ದಿನಗಳ ಹಿಂದೆ ಪೆಟ್ರೋಲ್ ಪ್ರತಿ ಲೀ.ಗೆ 100 ರೂ. ದಾಟಿದ್ದರೆ ಈಗ ಡೀಸೆಲ್ ಬೆಲೆ ಶತಕ ಬಾರಿಸಿದೆ. ಅಡಿಗೆ ಅನಿಲದ ಸಿಲಿಂಡರ್‌ನ ಬೆಲೆ 1,000 ರೂ.ದಾಟಿದಾಗ ಇನ್ನೊಂದು ಸಂಭ್ರಮಾಚರಣೆಗೆ ಅವಕಾಶವಿರಲಿದೆ ’ಎಂದು ಚಿದಂಬರಂ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News