"ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯದ ಹಿತಾಸಕ್ತಿ ಮೇಲು": ಮತಾಂತರ ವಿರೋಧಿ ಕಾನೂನು ಸಮರ್ಥಿಸಿಕೊಂಡ ಉ.ಪ್ರ. ಸರಕಾರ

Update: 2021-10-26 10:20 GMT

ಲಕ್ನೊ: ತನ್ನ ಮತಾಂತರ ವಿರೋಧಿ ಕಾನೂನನ್ನು ಸಮರ್ಥಿಸಿಕೊಂಡಿರುವ  ಉತ್ತರ ಪ್ರದೇಶ ಸರಕಾರವು "ವೈಯಕ್ತಿಕ ಹಿತಾಸಕ್ತಿಗಿಂತ ಸಮುದಾಯದ ಹಿತಾಸಕ್ತಿ ಯಾವಾಗಲೂ ಮೇಲುಗೈ ಸಾಧಿಸುತ್ತದೆ" ಎಂದು ಹೇಳಿದೆ ಎಂದು Live Law ಸೋಮವಾರ ವರದಿ ಮಾಡಿದೆ.

ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆದಿತ್ಯನಾಥ್ ಸರಕಾರ ಈ ವಿಷಯವನ್ನು ಸಲ್ಲಿಸಿದೆ. ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ರಾಜ್ಯ ಸರಕಾರ ಸ್ಪಂದಿಸಿದೆ.

'ಲವ್ ಜಿಹಾದ್' ಗೆ ದಂಡ ವಿಧಿಸಲು ಮತಾಂತರ-ವಿರೋಧಿ ಕಾನೂನನ್ನು ಜಾರಿಗೆ ತಂದಿರುವ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಸೇರಿದೆ.

ಬಲವಂತದ ಮತಾಂತರಗಳನ್ನು ತಡೆಯಲು ಮತಾಂತರ ವಿರೋಧಿ ಕಾನೂನು ಪ್ರಯತ್ನಿಸಿದೆ ಎಂದು ಉತ್ತರ ಪ್ರದೇಶ ಸರಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News