ದಿಲ್ಲಿ ಗಲಭೆ: ಪೊಲೀಸ್ ಆಯುಕ್ತರಿಂದ ವಿವರಣೆ ಕೋರಿದ್ದ ಆದೇಶ ರದ್ದುಪಡಿಸಿದ ನ್ಯಾಯಾಲಯ

Update: 2021-10-26 11:01 GMT

ಹೊಸದಿಲ್ಲಿ: ಫೆಬ್ರವರಿ 2020 ರಲ್ಲಿ ನಡೆದ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸದಿದ್ದಕ್ಕಾಗಿ ಪೊಲೀಸ್ ಆಯುಕ್ತರಿಂದ ವಿವರಣೆಯನ್ನು ಕೋರಿದ್ದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆದೇಶವನ್ನು ದಿಲ್ಲಿಯ ಸೆಷನ್ಸ್ ನ್ಯಾಯಾಲಯವು ಸೋಮವಾರ ರದ್ದುಗೊಳಿಸಿದೆ ಎಂದು Live Law ವರದಿ ಮಾಡಿದೆ.

ಸೆಪ್ಟೆಂಬರ್ 25 ರಂದು ನೀಡಿದ ಆದೇಶಕ್ಕೆ ಅನುಗುಣವಾಗಿ ತನಿಖಾ ವರದಿಯನ್ನು ಸಲ್ಲಿಸದಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ವಿವರಿಸಲು ಅಕ್ಟೋಬರ್ 21 ರಂದು ಮ್ಯಾಜಿಸ್ಟ್ರೇಟ್ ದಿಲ್ಲಿ ಪೊಲೀಸ್ ಆಯುಕ್ತರನ್ನು ಕೇಳಿದ್ದರು.

ಅಕ್ಟೋಬರ್ 21 ರಂದು ನೀಡಿದ್ದ ಆದೇಶವನ್ನು ಪ್ರಧಾನ ಜಿಲ್ಲಾ ಹಾಗೂ  ಸೆಷನ್ಸ್ ನ್ಯಾಯಾಧೀಶ ರಮೇಶ್ ಕುಮಾರ್ ಅವರು ಸೋಮವಾರ ರದ್ದುಗೊಳಿಸಿದ್ದಾರೆ.

ಸೆಷನ್ಸ್ ನ್ಯಾಯಾಲಯವು ನಿರ್ದೇಶನಕ್ಕೆ ತಡೆಯಾಜ್ಞೆ ನೀಡಿದ್ದರೂ ಕೂಡ  ಅಕ್ಟೋಬರ್ 21 ರಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಪೊಲೀಸ್ ಮುಖ್ಯಸ್ಥರಿಂದ ವಿವರಣೆಯನ್ನು ಕೋರಿ ಆದೇಶವನ್ನು ನೀಡಿದ್ದರು ಎಂದು ಕುಮಾರ್ ಗಮನಿಸಿದರು.

ಈ ಹಿಂದೆ ಅಕ್ಟೋಬರ್ 21 ರಂದು ಸೆಷನ್ಸ್ ಕೋರ್ಟ್ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News