ಎಲ್ಗಾರ್ ಪರಿಷತ್ ಪ್ರಕರಣ: ನವೆಂಬರ್ 18ರ ವರೆಗೆ ವರವರ ರಾವ್ ಶರಣಾಗತರಾಗಬೇಕಿಲ್ಲ ಎಂದ ಬಾಂಬೆ ಹೈಕೋರ್ಟ್‌

Update: 2021-10-26 17:11 GMT

ಮುಂಬೈ, ಅ. 26: ಮಧ್ಯಂತರ ಜಾಮೀನಿನಲ್ಲಿ ಇರುವ ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿ, ಕವಿ ವರವರ ರಾವ್ ಅವರು ನವೆಂಬರ್ 18ರ ವರೆಗೆ ತಲೋಜಾ ಕಾರಾಗೃಹದ ಅಧಿಕಾರಿಗಳ ಮುಂದೆ ಶರಣಾಗತರಾಗಬೇಕಾಗಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ ಮಂಗಳವಾರ ಹೇಳಿದೆ. ಅಲ್ಲದೆ, ವರವರ ರಾವ್ ಅವರು ಸಲ್ಲಿಸಿದ ಮನವಿಯ ವಿಚಾರಣೆಯನು್ನ ಮುಂದಿನ ತಿಂಗಳಿಗೆ ಮುಂದೂಡಿದೆ.

ವೈದ್ಯಕೀಯ ನೆಲೆಯ ಆಧಾರದಲ್ಲಿ ವರವರ ರಾವ್ (82) ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ಕಳೆದ ವರ್ಷ ಫೆಬ್ರವರಿಯಲ್ಲಿ 6 ತಿಂಗಳು ಮಧ್ಯಂತರ ಜಾಮೀನು ನೀಡಿತ್ತು. ಅವರು ಸೆಪ್ಟಂಬರ್ 5ರಂದು ನ್ಯಾಯಾಂಗ ಕಸ್ಟಡಿಗೆ ಹಿಂದಿರುಗಲು ಹಾಗೂ ಶರಣಾಗತರಾಗಲು ಸಮಯ ನಿಗದಿಪಡಿಸಲಾಗಿತ್ತು. ವರವರ ರಾವ್ ಅವರು ತನ್ನ ಮಧ್ಯಂತರ ಜಾಮೀನನ್ನು ವಿಸ್ತರಿಸುವಂತೆ ಕೋರಿ ವಕೀಲರಾದ ಆರ್ ಸತ್ಯನಾರಾಯಣನ್ ಹಾಗೂ ಹಿರಿಯ ವಕೀಲ ಆನಂದ ಗ್ರೋವರ್ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಜೈಲಿನಿಂದ ಹೊರಗೆ ಇರುವ ಸಂದರ್ಭ ತನ್ನ ಊರಾದ ಹೈದರಾಬಾದ್ನಲ್ಲಿ ಇರಲು ಅನುಮತಿ ನೀಡುವಂತೆ ಅವರು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News