ಜೋಕಟ್ಟೆ: ವಿವಿಧ ಬೇಡಿಕೆ ಮುಂದಿಟ್ಟು ಸೆಝ್ ಪ್ರಧಾನ ದ್ವಾರದ ಮುಂಭಾಗದಲ್ಲಿ ಡಿವೈಎಫ್ಐ ಧರಣಿ

Update: 2021-10-27 11:11 GMT

ಮಂಗಳೂರು, ಅ.27: ಮಂಗಳೂರು ಸೆಝ್ ಗೆ ಭೂಮಿ ಕಳೆದು ಕೊಂಡಿರುವ ಸಂತ್ರಸ್ತ ಕುಟುಂಬದ ಅಭ್ಯರ್ಥಿಗಳನ್ನು ಒಪ್ಪಂದದಂತೆ ತಕ್ಷಣ ನೇಮಕಾತಿಗೊಳಿಸಬೇಕು, ಜೆಬಿಎಫ್ ಕಂಪೆನಿ ಉತ್ಪಾದನೆ ಆರಂಭಿಸಬೇಕು, ಸೆಝ್ ನಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ  ಕಡ್ಡಾಯವಾಗಿ ಉದ್ಯೋಗ ಮೀಸಲಿಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಡಿವೈಎಫ್ಐ ಮಂಗಳೂರು ನಗರ ಸಮಿತಿ ಜೋಕಟ್ಟೆಯಲ್ಲಿರುವ ಸೆಝ್ ಪ್ರಧಾನ ದ್ವಾರದ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಿತು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಧರಣಿಯನ್ನು ಉದ್ಘಾಟಿಸಿದರು.

 ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ನಾಗರಿಕ ಹೋರಾಟ ಸಮಿತಿಯ ಅಬೂಬಕರ್ ಭಾವ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು‌.

ಡಿವೈಎಫ್ಐ ಮುಖಂಡರಾದ ಆಶಾ ಬೋಳೂರು, ಸಿಲ್ವಿಯಾ ಜೋಕಟ್ಟೆ, ಮಕ್ಸೂದ್ ಕಾನ, ಮುಸ್ತಫ ಬೈಕಂಪಾಡಿ, ನಿತಿನ್ ಬಂಗೇರ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಎಸ್.ಬಶೀರ್, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ನವಾಝ್, ಬಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆದಂ ಕಳವಾರು, ತೋಕೂರು ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂಸು ಇದ್ದಿನಬ್ಬ, ಶೇಖರ್ ನಿರ್ಮುಂಜೆ, ವಿಶ್ವನಾಥ ಜೋಕಟ್ಟೆ, ಆಮಿನಮ್ಮ, ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯ ಶ್ರೀನಾಥ್ ಕುಲಾಲ್ ಸ್ವಾಗತಿಸಿ, ವಂದಿಸಿದರು.

ಧರಣಿಗೆ ಮುನ್ನ ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗದಿಂದ ಸೆಝ್ ದ್ವಾರದ ವರಗೆ ಮೆರವಣಿಗೆ ನಡೆಯಿತು. ಸೆಝ್ ನ ಹಿರಿಯ ಅಧಿಕಾರಿಗಳಾದ ಹಿಟಾ ಶ್ರೀನಿವಾಸ ರಾಜು, ಯೋಗೀಶ್, ಹನೀಫ್ ಧರಣಿನಿರತರ ಬಳಿ ಬಂದು ಮನವಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News